ಸುರಪುರ : ಹೊರ ರಾಜ್ಯದಿಂದ ಬಂದ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ವದಂತಿ ಹರಡುತ್ತಿದ್ದಂತೆ ನಗರದ ಜನರು ಭಯಭೀತರಾಗಿ ಮನೆಯಿಂದ ಯಾರು ಹೊರ ಬರುತ್ತಿಲ್ಲ.
ಗುಜರಾತ್ ನಿಂದ ಬಂದ ದಂಪತಿಗೆ ಕೊರೊನಾ ವದಂತಿ ...ಸ್ತಬ್ಧವಾದ ಸುರಪುರ - ಗುಜರಾತ್ ನಿಂದ ಬಂದ ದಂಪತಿಗೆ ಕೊರೊನಾ ಶಂಕೆ ...ಸ್ತಬ್ಧವಾದ ಸುರಪುರ
ಗುಜರಾತ್ ನಿಂದ ಬಂದಿರುವ ನಗರದ ಆಸರ ಮೊಹಲ್ಲಾದ ದಂಪತಿಗೆ ಕೊರೊನಾ ಇದೆ ಎಂಬ ವದಂತಿ ಎಲ್ಲೆಡೆ ದಟ್ಟವಾಗಿದೆ. ಅಲ್ಲದೆ ವದಂತಿಗೆ ಇಂಬು ಕೊಡುವಂತೆ ನಗರಸಭೆ ಸಿಬ್ಬಂದಿ ವಾಹನದಲ್ಲಿ ಪ್ರಚಾರ ಮಾಡಿ ಜಿಲ್ಲಾಧಿಕಾರಿಗಳ ಆದೇಶದಂತೆ ಲಾಕ್‌ಡೌನ್ ಘೋಷಣೆಯಾಗಿದೆ ಎಂದು ತಿಳಿಸಿದ್ದಾರೆ.
ಸ್ತಬ್ಧವಾದ ಸುರಪುರ

ಸಾರ್ವಜನಿಕರು ಹೊರಗೆ ಬರದಂತೆ ಹಾಗೂ ಅಂಗಡಿ ಮುಂಗಟ್ಟುಗಳನ್ನು ತೆಗೆಯದಂತೆ ಪ್ರಚಾರ ಮಾಡಿದ್ದರಿಂದ ಇಡೀ ನಗರ ಸಂಪೂರ್ಣ ಸ್ತಬ್ಧಗೊಂಡಿದೆ. ಇಲ್ಲಿಯವರೆಗೆ ಗ್ರೀನ್ ಝೋನ್ ಇದ್ದ ಸುರಪುರ ನಗರ ಈಗ ಡೇಂಜರ್ ಝೋನ್ ನತ್ತ ವಾಲುತ್ತಿದೆ.