ಯಾದಗಿರಿ: ಜಿಲ್ಲೆಯಲ್ಲಿಂದು 86 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಓರ್ವ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ.
ಯಾದಗಿರಿಯಲ್ಲಿಂದು 86 ಮಂದಿಗೆ ಕೊರೊನಾ..ಓರ್ವ ಮಹಿಳೆ ಸಾವು
ಯಾದಗಿರಿ ಜಿಲ್ಲೆಯಲ್ಲಿಂದು 86 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,511ಕ್ಕೆ ಏರಿಕೆಯಾಗಿದೆ.
ಯಾದಗಿರಿಯಲ್ಲಿಂದು 86 ಮಂದಿಗೆ ಕೊರೊನಾ..ಓರ್ವ ಮಹಿಳೆ ಸಾವು
ಇಂದು 12 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 1,915 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 2,511ಕ್ಕೆ ಏರಿಕೆಯಾಗಿದ್ದು, 588 ಸಕ್ರಿಯ ಪ್ರಕರಣಗಳಿವೆ. ಶಹಪುರ ಪಟ್ಟಣದ 57 ವರ್ಷದ ಮಹಿಳೆ ಮೃತಪಟ್ಟಿದ್ದು, ಈವರೆಗೆ 8 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಇಂದು ವರದಿಯಾದ 86 ಪ್ರಕರಣಗಳಲ್ಲಿ 43 ಮಂದಿ ಯಾದಗರಿ ನಗರ ಮತ್ತು ಗ್ರಾಮೀಣ ಪ್ರದೇಶವರು, ಶಹಾಪುರ ತಾಲೂಕಿನ 33, ಸುರಪುರದಲ್ಲಿ 9 ಹಾಗೂ ಒಂದು ಅಂತರ್ ಜಿಲ್ಲೆಯ ಪ್ರಕರಣ ದೃಢಪಟ್ಟಿದೆ.