ಯಾದಗಿರಿ: ಇಷ್ಟು ದಿನ ಮಹಾರಾಷ್ಟ್ರದಿಂದ ಜಿಲ್ಲೆಗೆ ವಾಪಸ್ ಆದ ವಲಸಿಗರಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಹಾಮಾರಿ ಕೊರೊನಾ ವೈರಸ್, ಇದೀಗ ಮೂರು ಜನ ಕೊರೊನಾ ವಾರಿಯರ್ಸ್ಗೆ ವಕ್ಕರಿಸಿದೆ.
ಯಾದಗಿರಿ ನಗರದ ಕಂಟೈನ್ಮೆಂಟ್ ಝೋನ್ ನಲ್ಲಿ ಕೆಲಸ ಮಾಡಿದ ಅಂಗನವಾಡಿ ಸಹಾಯಕಿ ಸೇರಿದಂತೆ ಹೋಮ್ ಕ್ವಾರಂಟೈನ್ನಲ್ಲಿದ್ದ ವಲಸೆ ಕಾರ್ಮಿಕರ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಿದ್ದ ಇಬ್ಬರು ಅಂಗನವಾಡಿ ಕಾರ್ಯಕರ್ತೆಯರಿಗೆ ಈಗ ಸೋಂಕು ದೃಢಪಟ್ಟಿದೆ.
ಆರೋಗ್ಯ ಇಲಾಖೆ ಗುರುವಾರ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ನಲ್ಲಿ ಈ ಮೂರು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ದುಕನವಾಡಿ ಕಂಟೈನ್ಮೆಂಟ್ ಝೋನ್ ಅಂಗನವಾಡಿ ಸಹಾಯಕಿ ಪಿ 7894 ಜೊತೆಗೆ ಜಿಲ್ಲೆಯ ಸುರಪುರ ತಾಲೂಕಿನ ದಿವಳಗುಡ್ಡ ಗ್ರಾಮದಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದ ಮಹರಾಷ್ಟ್ರದ ವಲಸಿಗರ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ 7895 ಮತ್ತು ಪಿ ನಂ 7896 ಅಂಗನವಾಡಿ ಕರ್ಯಕರ್ತೆಯರಿಗೆ ಕಿಲ್ಲರ್ ಕೊರೊನಾ ವಕ್ಕರಿಸಿದೆ.
ಇದೀಗ ಸೋಂಕು ತಗುಲಿದವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಪತ್ತೆ ಹಚ್ಚುವ ಕಾರ್ಯದಲ್ಲಿ ಜಿಲ್ಲಾಡಳಿತ ತೊಡಗಿದೆ.