ಯಾದಗಿರಿ: ಬೆಂಗಳೂರಿನಿಂದ ಮದುವೆ ಮಾಡಿಕೊಳ್ಳಲು ಜಿಲ್ಲೆಗೆ ಆಗಮಿಸಿದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ತಾತ್ಕಾಲಿಕವಾಗಿ ಮದುವೆಯನ್ನು ಮುಂದೂಡಲಾಗಿದೆ.
ಬೆಂಗಳೂರಿನಿಂದ ಊರಿಗೆ ಬಂದ ಯುವಕನಿಗೆ ಕೊರೊನಾ... ಮದುವೆಗೆ ಅಡ್ಡಿಯಾಯ್ತು ಮಹಾಮಾರಿ! - yadgiri news 2020
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಯುವಕನೊಬ್ಬ ವಿವಾಹವಾಗುವ ಹಿನ್ನೆಲೆ ಬೆಂಗಳೂರಿನಿಂದ ತನ್ನ ಗ್ರಾಮಕ್ಕೆ ಮರಳಿದ್ದು ದುರದೃಷ್ಟವಶಾತ್ ಆತನಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.
ಜಿಲ್ಲೆಯ ಶಹಾಪುರ ತಾಲೂಕಿನ ಗ್ರಾಮವೊಂದರ ಯುವಕ ವಿವಾಹವಾಗುವ ಹಿನ್ನೆಲೆ ಕಳೆದ ಜೂನ್ 29 ರಂದು ತನ್ನ ಗ್ರಾಮಕ್ಕೆ ಬಂದಿದ್ದ. ಅಲ್ಲದೇ ಈ ತಿಂಗಳ 13 ರಂದು ಆತನ ಮದುವೆ ನಿಶ್ಚಯವಾಗಿತ್ತು. ಆದರೆ ಯುವಕ ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದುದರ ಹಿನ್ನೆಲೆ ಸ್ವಯಂ ಪ್ರೇರಿತನಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾನೆ. ಇದೀಗ ವರದಿ ಪಾಸಿಟಿವ್ ಬಂದಿದೆ.
ಈಗಾಗಲೇ ಯುವಕ ತನ್ನ ಮದುವೆ ಕಾರ್ಯದ ನಿಮಿತ್ತ ಗ್ರಾಮ ಸೇರಿದಂತೆ ಹಲೆವೆಡೆ ಓಡಾಡಿದ್ದರಿಂದಾಗಿ ಜನರಲ್ಲಿ ಕರೋನಾ ಭೀತಿ ಎದುರಾಗಿದೆ. ಸದ್ಯ ಸೋಂಕು ತಗುಲಿದ ಯುವಕನನ್ನ ಚಿಕಿತ್ಸೆಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಾಲೂಕಿನ ಬಂದಳ್ಳಿ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಿದ್ದಾರೆ.