ಕರ್ನಾಟಕ

karnataka

ETV Bharat / state

ಕೊರೊನಾ ಎಫೆಕ್ಟ್​: ಆರ್ಥಿಕ ನಷ್ಟ ತಡೆಯಲು 29 ರೈಲುಗಳ ಸಂಚಾರ ಸ್ಥಗಿತಗೊಳಿಸಿದ ರೈಲ್ವೆ ಇಲಾಖೆ - ಕೊರೊನಾ ಎಫೆಕ್ಟ್​

ಕೊರೊನಾ ಭೀತಿಯಿಂದ ಜನರು ಪ್ರಯಾಣವನ್ನು ಮೊಟಕುಗೊಳಿಸುತ್ತಿದ್ದಾರೆ. ಇದರಿಂದ ತೀವ್ರ ಸಂಕಷ್ಟ ಅನುಭವಿಸುತ್ತಿರುವ ರೈಲ್ವೆ ಇಲಾಖೆ ನಷ್ಟ ತಡೆಯಲು 29 ರೈಲುಗಳನ್ನು ರದ್ದುಗೊಳಿಸಿದೆ.

Raily department cancel the 29 rails
ಆರ್ಥಿಕ ನಷ್ಟ ತಡೆಯಲು 29 ರೈಲುಗಳ ಸಂಚಾರ ಸ್ಥಗಿತ

By

Published : Mar 18, 2020, 1:41 PM IST

ಯಾದಗಿರಿ:ಕೊನೊನಾ ವೈರಸ್​ ಜನರನ್ನು ಭಯಭೀತರನ್ನಾಗಿಸುತ್ತಿದ್ದು, ಸೋಂಕು ಹರಡುವ ಆತಂಕದಿಂದ ಜನರು ಪ್ರಯಾಣವನ್ನು ನಿಲ್ಲಿಸಿದ್ದಾರೆ. ಇದರಿಂದ ರೈಲ್ವೆ ಇಲಾಖೆ ಸಾಕಷ್ಟು ನಷ್ಟ ಅನುಭವಿಸುತ್ತಿದೆ.

ಆರ್ಥಿಕ ನಷ್ಟ ತಡೆಯಲು 29 ರೈಲುಗಳ ಸಂಚಾರ ಸ್ಥಗಿತಗೊಳಿಸಿದ ರೈಲ್ವೆ ಇಲಾಖೆ

ಚೀನಾದಿಂದ ಇಡೀ ದೇಶವನ್ನೇ ವ್ಯಾಪಿಸುತ್ತಿರುವ ಕೊರೊನಾ ಸೋಂಕು ದೇಶದ ಆರ್ಥಿಕತೆಗೆ ಧಕ್ಕೆ ತಂದಿದೆ. ಸೋಂಕು ಹರಡುವ ಭಯದಿಂದ ಜನರು ಪ್ರಯಾಣವನ್ನು ಮೊಟಕುಗೊಳಿಸಿದ್ದು, ಪರಿಣಾಮ ರೈಲ್ವೆ ಇಲಾಖೆ ನಿತ್ಯ 6 ಕೋಟಿ ರೂpಆಯಿ ನಷ್ಟ ಅನುಭವಿಸುತ್ತಿದೆ. ಪ್ರತಿನಿತ್ಯ ಸಂಚರಿಸುವ ರೈಲುಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.

ರೈಲ್ವೆ ಇಲಾಖೆ ಆದೇಶದ ಪ್ರತಿ

29 ರೈಲುಗಳು ರದ್ದು:

ಇತ್ತ ರೈಲ್ವೆ ಇಲಾಖೆ ಆರ್ಥಿಕ ನಷ್ಟ ತಡೆಯಲು ಇಂದಿನಿಂದ ಮುಂಬೈ, ಚೆನ್ನೈ, ಹೈದರಾಬಾದ್, ಸಿಕಂದರಾಬಾದ್​, ಕಲಬುರಗಿ, ಮುಂಬೈ ವಿಭಾಗ ಸೇರಿದಂತೆ ದೇಶಾದ್ಯಂತ ಓಡಾಡುವ 29ಕ್ಕೂ ಹೆಚ್ಚು ರೈಲುಗಳನ್ನು ರದ್ದು ಮಾಡಿದೆ.

ABOUT THE AUTHOR

...view details