ಕರ್ನಾಟಕ

karnataka

ETV Bharat / state

ಲಾಕ್​​ಡೌನ್​ ಎಫೆಕ್ಟ್​: ಭತ್ತ ಮಾರಲಾಗದೆ ಸಂಕಷ್ಟದಲ್ಲಿ ರೈತ - ಯಾದಗಿರಿ ಸುದ್ದಿ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಕೊರೊನಾ ಎಫೆಕ್ಟ್​ನಿಂದಾಗಿ ಭತ್ತ ಖರೀದಿಸಲು ಖರೀದಿದಾರರು ಬರುತ್ತಿಲ್ಲ. ಹೀಗಾಗಿ ರೈತರು ಭತ್ತ ಮಾರಲಾಗದೆ ಕಂಗಾಲಾಗಿದ್ದಾರೆ.

Corona Effect: A distressed farmer who does not sell paddy
ಕೊರೊನಾ ಎಫೆಕ್ಟ್​: ಭತ್ತ ಮಾರಲಾಗದೇ ರೈತ ಸಂಕಷ್ಟಕ್ಕೀಡಾದ ರೈತ

By

Published : Apr 24, 2020, 4:50 PM IST

ಯಾದಗಿರಿ: ಸುರಪುರ ತಾಲೂಕಿನಲ್ಲಿ ಲಕ್ಷಾಂತರ ಕ್ವಿಂಟಾಲ್ ಭತ್ತ ಬೆಳೆದ ರೈತರು ಪ್ರತಿ ವರ್ಷ ಈ ಸಮಯಕ್ಕೆ ಭತ್ತ ಮಾರಾಟ ಮಾಡಿ ಆರಾಮಾಗಿರುತ್ತಿದ್ಧರು. ಆದರೆ ಈ ವರ್ಷ ಕೊರೊನಾದಿಂದಾಗಿ ಖರೀದಿದಾರರು ಬರುತ್ತಿಲ್ಲ. ಹೀಗಾಗಿ ಕಂಗಾಲಾಗಿದ್ದಾರೆ.

ಕೊರೊನಾ ಎಫೆಕ್ಟ್​: ಭತ್ತ ಮಾರಲಾಗದೆ ಸಂಕಷ್ಟಕ್ಕೀಡಾದ ರೈತ

ಈಗಾಗಲೇ ಎರಡು ಬಾರಿ ತಾಲೂಕಿನಲ್ಲಿ ಅಕಾಲಿಕವಾಗಿ ಸುರಿದ ಮಳೆ ರೈತರಲ್ಲಿ ಮತ್ತಷ್ಟು ಆತಂಕ ಹೆಚ್ಚುವಂತೆ ಮಾಡಿದೆ. ರಸ್ತೆ ಪಕ್ಕದಲ್ಲಿ, ಬಯಲು ಪ್ರದೇಶದಲ್ಲಿ ಎಲ್ಲೆಂದರಲ್ಲಿ ಹಾಕಿರುವ ಭತ್ತ ಮಳೆ ಬಂದರೆ ತೊಯ್ದು ಹಾಳಾಗುವ ಸಾಧ್ಯತೆ ಹೆಚ್ಚಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲು ಸುಮಾರು 22ರಿಂದ 25 ಸಾವಿರ ರೂಪಾಯಿಗಳವರೆಗೆ ಖರ್ಚು ಮಾಡಿರುವ ರೈತ, ಒಳ್ಳೆಯ ಬೆಲೆ ನಿರೀಕ್ಷಿಸುತ್ತಿದ್ದಾನೆ.

ಸರ್ಕಾರ ಉತ್ತಮ ಬೆಲೆಗೆ ಭತ್ತ ಖರೀದಿಸಬೇಕು. ಇಲ್ಲವಾದರೆ ನಮಗೆ ಸಾವೇ ಗತಿಯಾಗಲಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details