ಯಾದಗಿರಿ: ಮುಂಬೈನಿಂದ ಆಗಮಿಸಿದ 55 ವರ್ಷದ ಮಹಿಳೆಗೆ ಇಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ತಲುಪಿದೆ.
ಮುಂಬೈನಿಂದ ಯಾದಗಿರಿಗೆ ಬಂದ ಮಹಿಳೆಗೆ ಕೊರೊನಾ: 13ಕ್ಕೇರಿದ ಸೋಂಕಿತರ ಸಂಖ್ಯೆ - corona infection
ಮೇ 14ರಂದು ಮುಂಬೈನಿಂದ ಯಾದಗಿರಿಗೆ ಬಂದಿದ್ದ ಮಹಿಳೆಗೆ ಸೋಂಕು ತಗುಲಿದೆ. ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯಾದಗಿರಿ
ಮೇ 14ರಂದು ಮುಂಬೈನಿಂದ ಈ ಮಹಿಳೆ ಯಾದಗಿರಿಗೆ ಬಂದಿದ್ದರು. ಮಹಿಳೆ ಜೊತೆ 14 ವಲಸೆ ಕಾರ್ಮಿಕರು ಕೂಡ ಜಿಲ್ಲೆಗೆ ಆಗಮಿಸಿದ್ದರು. ಅವರನ್ನು ಗುರಮಠಕಲ್ ತಾಲೂಕಿನ ಎಂಪಾಡ್ ತಾಂಡಾದ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಕ್ವಾರಂಟೈನ್ ಮಾಡಿದ ಈ 15 ಮಂದಿ ಪೈಕಿ 55 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ನಗರದ ಜಿಲ್ಲಾಸ್ಪತ್ರೆಯ ಕೋವಿಡ್-19 ವಾರ್ಡ್ಗೆ ಅವರನ್ನ ದಾಖಲಿಸಲಾಗಿದೆ.