ಯಾದಗಿರಿ: ಜಿಲ್ಲೆಯಲ್ಲಿಂದು ಮತ್ತೆ 8 ಜನರಿಗೆ ಕೊರೊನಾ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 949 ಕ್ಕೆ ಏರಿಕೆಯಾಗಿದೆ.
ಯಾದಗಿರಿಯಲ್ಲಿ ಮತ್ತೆ 8 ಜನರಿಗೆ ಕೊರೊನಾ:14 ಮಂದಿ ಸೋಂಕಿನಿಂದ ಗುಣಮುಖ - Corona case in Yadagiri
ಯಾದಗಿರಿ ಜಿಲ್ಲೆಯಲ್ಲಿಂದು ಮತ್ತೆ 8 ಜನರಿಗೆ ಕೊರೊನಾ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 949 ಕ್ಕೆ ಏರಿಕೆಯಾಗಿದೆ.
![ಯಾದಗಿರಿಯಲ್ಲಿ ಮತ್ತೆ 8 ಜನರಿಗೆ ಕೊರೊನಾ:14 ಮಂದಿ ಸೋಂಕಿನಿಂದ ಗುಣಮುಖ dsdd](https://etvbharatimages.akamaized.net/etvbharat/prod-images/768-512-7853305-thumbnail-3x2-vish.jpg)
ಮಹರಾಷ್ಟ್ರದಿಂದ ಯಾದಗಿರಿಗೆ ಆಗಮಿಸಿದ 38 ವರ್ಷದ ಪಿ.15479 ವ್ಯಕ್ತಿ ಸೇರಿದಂತೆ ಒಟ್ಟು ಎಂಟು ಜನರಿಗೆ ಕೊರೊನಾ ವಕ್ಕರಿಸಿದೆ. ಏಳು ಜನರ ಸಂಪರ್ಕ ಪತ್ತೆ ಹಚ್ಚುವ ಕಾರ್ಯದಲ್ಲಿ ಜಿಲ್ಲಾಡಳಿತ ತೊಡಗಿದೆ. ಇಂದು 14 ಜನ ಕೊರೊನಾದಿಂದ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹಿಂದಿದ್ದು, ಒಟ್ಟು ಪ್ರಕರಣಗಳ ಪೈಕಿ ಇಲ್ಲಿಯವರೆಗೆ 838 ಜನ ಗುಣಮುಖರಾಗಿ ಒಬ್ಬರು ಮೃತಪಟ್ಟಿರುತ್ತಾರೆ.
ಸೋಂಕು ಧೃಡ ಪಟ್ಟವರನ್ನು ಜಿಲ್ಲೆಯ ನಿಗದಿತ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.ಮಹರಾಷ್ಟ್ರದಿಂದ ಆಗಮಿಸಿದವರಲ್ಲೇ ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಕೊರೊನಾ ಸಮುದಾಯದ ಹಂತಕ್ಕೂ ವ್ಯಾಪಿಸಿತ್ತಿರುವ ಅನುಮಾನ ಕಾಡುತ್ತಿದೆ.