ಕರ್ನಾಟಕ

karnataka

ETV Bharat / state

ಆತ್ಮಹತ್ಯೆ ಮಾಡಿಕೊಂಡ ಕಂಡಕ್ಟರ್​: ಹಿರಿಯ ಅಧಿಕಾರಿಗಳ ಕಿರುಕುಳ ಆರೋಪ - ಈಶಾನ್ಯ ಸಾರಿಗೆ ಸಂಸ್ಥೆ ಯ ಯಾದಗಿರಿ ಬಸ್ ಡಿಪೋ

ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

Conductor who committed suicide in Gurumitakal
ಆತ್ಮಹತ್ಯೆ ಮಾಡಿಕೊಂಡ ಕಂಡಕ್ಟರ್

By

Published : Dec 1, 2021, 6:44 PM IST

Updated : Dec 1, 2021, 7:31 PM IST

ಗುರುಮಠಕಲ್: ಕಂಡಕ್ಟರ್​ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ವೇತನ ಸರಿಯಾಗಿ ಆಗದಕ್ಕೆ ಹಾಗೂ ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಈ ರೀತಿ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಗುರುಮಠಕಲ್ ಪಟ್ಟಣದ ಲಕ್ಷ್ಮಿ ನಗರದಲ್ಲಿ ಈ ಘಟನೆ ಜರುಗಿದೆ. ಕಂಡಕ್ಟರ್ ಕಾಶಿನಾಥ ಆತ್ಮಹತ್ಯೆ ಮಾಡಿಕೊಂಡವರು. ಕಲಬುರಗಿ ಜಿಲ್ಲೆಯ ಉದನೂರು ಗ್ರಾಮದ ನಿವಾಸಿ ಕಾಶಿನಾಥ ಗುರುಮಠಕಲ್ ನಲ್ಲಿ ಕಳೆದ 11 ವರ್ಷಗಳಿಂದ ವಾಸವಿದ್ದರು. ಈಶಾನ್ಯ ಸಾರಿಗೆ ಸಂಸ್ಥೆಯ ಯಾದಗಿರಿ ಬಸ್ ಡಿಪೋದಲ್ಲಿ ಡ್ರೈವರ್ ಕಂ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಕಳೆದ ಐದಾರು ತಿಂಗಳಿಂದ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲದಿದ್ದಕ್ಕೆ ನೊಂದಿದ್ದರಂತೆ.

ಆತ್ಮಹತ್ಯೆ ಮಾಡಿಕೊಂಡ ಕಂಡಕ್ಟರ್​

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ 9ನೇ ತರಗತಿ ವಿದ್ಯಾರ್ಥಿಗೆ ಕೊರೊನಾ ದೃಢ: ಶಾಲೆಗೆ ರಜೆ

ಸ್ಥಳಕ್ಕೆ ಗುರುಮಠಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹಾಗೆ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

Last Updated : Dec 1, 2021, 7:31 PM IST

ABOUT THE AUTHOR

...view details