ಸುರಪುರ : ನಗರದ ವಿಪ್ರ ಸಮಾಜ ಬಾಂಧವರು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಶೃಂಗೇರಿಯಲ್ಲಿ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಪುತ್ಥಳಿ ಮೇಲೆ ಧ್ವಜ ಹಾರಿಸಿರುವುದನ್ನು ಖಂಡಿಸಿದರು.
ಹಿಂದೂ ಸಮಾಜದ ಸಂಸ್ಥಾಪಕರಾದ ಆದಿ ಶಂಕರಾಚಾರ್ಯರ ಪುತ್ಥಳಿಯ ಮೇಲೆ ಅನ್ಯಧರ್ಮೀಯ ಧ್ವಜ ಹಾರಿಸಿ ನಮ್ಮ ಭಾವನೆಯನ್ನು ಅವಮಾನಿಸಲಾಗಿದೆ. ಶೃಂಗೇರಿಯಲ್ಲಿ ಸ್ವಾಗತ ಗೋಪುರದಲ್ಲಿರುವ ಶ್ರೀ ಆದಿ ಶಂಕರಾಚಾರ್ಯರ ಪುತ್ಥಳಿಯ ಮೇಲೆ ಅನ್ಯ ಧರ್ಮದ ಧ್ವಜವನ್ನು ಹಾರಿಸಿರುವ ಕಿಡಿಗೇಡಿಗಳು ಯಾರೇ ಆಗಿರಲಿ ಅವರನ್ನು ಕೂಡಲೇ ಪತ್ತೆ ಹಚ್ಚಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.