ಕರ್ನಾಟಕ

karnataka

ETV Bharat / state

ಹೆಚ್ಚಿನ ನೀರು ಬಿಡುಗಡೆ: ಕೃಷ್ಣಾ ನದಿ ತಟಕ್ಕೆ ಹೋಗದಂತೆ ಸೂಚನೆ

ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುತ್ತಿದ್ದಂತೆ ಕೊಳ್ಳೂರ ಸೇತುವೆ ಅಪಾಯದ ಮಟ್ಟ ತಲುಪಿದ್ದು, ಶಹಾಪುರ ತಹಸೀಲ್ದಾರ್ ಸಂಗಮೇಶ ಜಿಡಗ್ ಭೇಟಿ ನೀಡಿ ಗ್ರಾಮಸ್ಥರಿಗೆ ನದಿ ತಟಕ್ಕೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.

ಅಪಾಯ ಮಟ್ಟ ಮೀರಿದೆ ಕೊಳ್ಳೂರ ಸೇತುವೆ

By

Published : Aug 4, 2019, 8:00 AM IST

ಯಾದಗಿರಿ: ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುತ್ತಿದ್ದಂತೆ ಕೊಳ್ಳೂರ ಸೇತುವೆ ಅಪಾಯದ ಮಟ್ಟ ತಲುಪಿದ್ದು, ಶಹಾಪುರ ತಹಸೀಲ್ದಾರ್ ಸಂಗಮೇಶ ಜಿಡಗ್ ಭೇಟಿ ನೀಡಿ ಗ್ರಾಮಸ್ಥರಿಗೆ ನದಿ ತಟಕ್ಕೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.

ಅಪಾಯದ ಮಟ್ಟ ಮೀರಿದೆ ಕೊಳ್ಳೂರ ಸೇತುವೆ

ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುತ್ತಿದ್ದಂತೆ ಕೊಳ್ಳೂರ ಸೇತುವೆ ಅಪಾಯದ ಮಟ್ಟ ತಲುಪಿದೆ. ಈಗಾಗಲೇ ಜಮೀನುಗಳು ಜಲಾವೃತವಾಗಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಈ ಹಿನ್ನೆಲೆ ಅಧಿಕಾರಿಗಳು ಭೇಟಿ ನೀಡಿ ಜನರಿಗೆ ನದಿ ಸೇತುವೆ ಬಳಿ ಬರದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

ಈಗಾಗಲೇ ಕೊಳ್ಳೂರ ಸೇತುವೆಗೆ ಜನರ ಸುರಕ್ಷತೆಗಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸೇತುವೆ ಮೇಲೆ ಜನ ಸಂಚಾರ ಮಾಡದಂತೆ ತಾಲೂಕು ಆಡಳಿತ ಎಚ್ಚರಿಕೆ ವಹಿಸುತ್ತಿದೆ. ತಹಸೀಲ್ದಾರ ಸಂಗಮೇಶ ಗ್ರಾಮಸ್ಥರೊಂದಿಗೆ ಚರ್ಚಿಸಿ ಮುಂಜಾಗೃತ ಕ್ರಮ ಕೈಗೊಂಡಿದ್ದು, ಭಯ ಪಡದಂತೆ ಜನರಿಗೆ ಅಭಯ ನೀಡಿದ್ದಾರೆ.

ABOUT THE AUTHOR

...view details