ಗುರುಮಠಕಲ್(ಯಾದಗಿರಿ):ಸ್ವಚ್ಚತೆಗೆ ಮತ್ತೊಂದು ಹೆಸರು ಪೌರಕಾರ್ಮಿಕರು.ನಮ್ಮ ನಿತ್ಯ ಜೀವನದಲ್ಲಿ ಬಿಸಾಡುವ ಕಸವನ್ನು ತೆಗೆದು ಪಟ್ಟಣದ ಸ್ವಾಸ್ಥ್ಯ ಕಾಪಾಡುವ ಪೌರಕಾರ್ಮಿಕರ ಸೇವೆ ಅನನ್ಯ ಎಂದು ಜೈ ಭೀಮಾ ಸೇವಾ ಸಂಸ್ಥೆ ಅಧ್ಯಕ್ಷ ಗುರುನಾಥ ತಲಾರಿ ಹೇಳಿದರು.
ಪೌರ ಕಾರ್ಮಿಕರ ಪಾದ ತೊಳೆದು ಪೂಜೆ.. ಸ್ವಚ್ಛತೆಯ ರೂವಾರಿಗಳಿಗೆ ಗೌರವ - Civic labor is another name for cleanliness
ಸ್ವಚ್ಚತೆಗೆ ಮತ್ತೊಂದು ಹೆಸರು ಪೌರಕಾರ್ಮಿಕರು. ಅವರ ಪಾದಗಳನ್ನು ತೊಳೆದು ಸನ್ಮಾನಿಸುವ ಮೂಲಕ ಅವರ ಕಾರ್ಯಕ್ಕೆ ವಿಶೇಷ ಗೌರವ ನೀಡಲಾಗಿದೆ-ಜೈ ಭೀಮಾ ಸೇವಾ ಸಂಸ್ಥೆ ಅಧ್ಯಕ್ಷ ಗುರುನಾಥ ತಲಾರಿ.
ಪಟ್ಟಣದ ಸರ್ಕ್ಯೂಟ್ ಹೌಸ್ನಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಪಾದಗಳನ್ನು ತೊಳೆದು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ನಸುಕಿನ ಜಾವದಲ್ಲಿಯೇ ಎದ್ದು, ರಸ್ತೆ ಸೇರಿದಂತೆ ಪ್ರತಿ ಗಲ್ಲಿಗಳಲ್ಲಿ ಕಸ ಶೇಖರಿಸಿ, ದುರ್ವಾಸನೆ ಬೀರುವ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಾರೆ. ಈ ಮೂಲಕ ಯಾವುದೇ ಸಾಂಕ್ರಾಮಿಕ ರೋಗ ಹರಡದಂತೆ ಪಟ್ಟಣದ ಸೌಂದರ್ಯ ಹೆಚ್ಚಿಸಲು ಎಲೆಮರೆಯ ಕಾಯಿಯಂತೆ ವರ್ಷ ಪೂರ್ತಿ ಶ್ರಮ ಪಡುವ ಪೌರಕಾರ್ಮಿಕರ ಸೇವೆ ಮೆಚ್ಚುವಂತಹದ್ದು ಎಂದರು.
ಇದನ್ನೂ ಓದಿ:ಕಸ ಗುಡಿಸುವ ಕೆಲಸದಿಂದ ಸಹಾಯಕ ಜನರಲ್ ಮ್ಯಾನೇಜರ್‌ವರೆಗೆ..: ಈ ಮಹಿಳೆಯ ಸಾಧನೆ ಅಷ್ಟಿಷ್ಟಲ್ಲ!