ಕರ್ನಾಟಕ

karnataka

ETV Bharat / state

ಲಾಕ್‌ಡೌನ್‌ ಮಧ್ಯೆ ಮೃತಪಟ್ಟ ಹಸುಗೂಸು: ಶವ ಸಂಸ್ಕಾರಕ್ಕೆ ಪೌರಕಾರ್ಮಿಕರ ನೆರವು - ಯಾದಗಿರಿ ಲೇಟೆಸ್ಟ್ ನ್ಯೂಸ್​

ಯಾದಗಿರಿಯಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದ ಮಗುವಿನ ಅಂತ್ಯಸಂಸ್ಕಾರ ನಡೆಸಲು ಪರದಾಡುತ್ತಿದ್ದ ದಂಪತಿಗೆ ಪೌರ ಕಾರ್ಮಿಕರು ನೆರವು ನೀಡಿ ಮಾನವೀಯತೆ ಮೆರೆದರು.

Civic labour help to Baby Funeral at Yadgir
ಮಗುವಿನ ಶವ ಸಂಸ್ಕಾರಕ್ಕೆ ನೆರವು ನೀಡಿದ ಪೌರಕಾರ್ಮಿಕರು

By

Published : Mar 29, 2020, 8:03 AM IST

ಯಾದಗಿರಿ :ಇಡೀ ದೇಶವೇ ಲಾಕ್​ಡೌನ್​ನಿಂದ ಸ್ತಬ್ಧವಾಗಿದೆ. ಈ ಸಂದರ್ಭದಲ್ಲಿ ಮಗು ಕಳೆದುಕೊಂಡ ಪೋಷಕರು ಶವ ಸಂಸ್ಕಾರ ಮಾಡಲು ಪರದಾಡುತ್ತಿದ್ದರು. ಈ ವೇಳೆ ಪೌರ ಕಾರ್ಮಿಕರು ನೆರವಿಗೆ ಧಾವಿಸಿ ಮಗುವಿನ ಅಂತ್ಯಕ್ರಿಯೆ ನೆರೆವೇರಿಸಿ ಮಾನವೀಯತೆ ತೋರಿಸಿದರು.

ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಕಲ್ಯಾಣ ಸಿಂಗ್ ಎಂಬುವವರ 25 ದಿನದ ಹಸುಗೂಸು ಅನಾರೋಗ್ಯದಿಂದ ಮೃತಪಟ್ಟಿದೆ. ಮಗುವಿನ ಶವ ಸಂಸ್ಕಾರ ಮಾಡವುದಕ್ಕೂ ಆಗದೆ ಪೋಷಕರು ಸಂಕಷ್ಟದಲ್ಲಿದ್ದರು. ಈ ವಿಚಾರ ತಿಳಿದ ಸ್ಥಳೀಯ ಎಸ್​ಡಿಪಿಐ ನಾಯಕರು ಹಾಗೂ ನಗರಸಭೆ ಪೌರ ಕಾರ್ಮಿಕರು ಕಲ್ಯಾಣಸಿಂಗ್ ನೆರವಿಗೆ ಧಾವಿಸಿ ಅಂತಿಮ ಕಾರ್ಯ ಮುಗಿಸಲು ನೆರವಾದರು.

ABOUT THE AUTHOR

...view details