ಯಾದಗಿರಿ:ಪೋಷಕರಿಗಾಗಿ ಅಂಗಲಾಚುತ್ತಿದ್ದ ಬಾಲಕನೊಬ್ಬನನ್ನು ಕಂಡು ಸ್ಥಳೀಯರೊಬ್ಬರು ಉಪಹಾರ ಕೊಡಿಸಿ, ಬಾಲಕನನ್ನ ಪೊಲೀಸರ ಬಳಿಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.
ಪೋಷಕರಿಂದ ಬೇರ್ಪಟ್ಟ ಬಾಲಕನ ವೇದನೆ; ಉಪಹಾರ ಕೊಡಿಸಿ ಮಾನವೀಯತೆ ಮೆರೆದ ನಾಗರಿಕ - ಯಾದಗಿರಿಯಲ್ಲಿ ಪೋಷಕರಿಗಾಗಿ ಬಾಲಕನ ಪರದಾಟ
ತಂದೆಯೊಂದಿಗೆ ಬೇರೆ ಊರಿಗೆ ಬಂದಿದ್ದ ಬಾಲಕನೊಬ್ಬ ತಪ್ಪಿಸಿಕೊಂಡು ಪರಿತಪಿಸುತ್ತಿದ್ದ ವೇಳೆ ಸ್ಥಳೀಯರೊಬ್ಬರು ಆತನಿಗೆ ತಿಂಡಿ ಕೊಡಿಸಿ, ನಂತರ ಪೊಲೀಸ್ ಠಾಣೆಗೆ ಕರೆದೊಯ್ಡು ಪೋಷಕರ ಬಳಿ ತಲುಪಿಸುವ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
![ಪೋಷಕರಿಂದ ಬೇರ್ಪಟ್ಟ ಬಾಲಕನ ವೇದನೆ; ಉಪಹಾರ ಕೊಡಿಸಿ ಮಾನವೀಯತೆ ಮೆರೆದ ನಾಗರಿಕ citizen helped the missing boy](https://etvbharatimages.akamaized.net/etvbharat/prod-images/768-512-8605692-533-8605692-1598707633839.jpg)
ಉಪಹಾರ ಕೊಡಿಸಿ ಮಾನವೀಯತೆ ಮೆರೆದ ನಾಗರೀಕ
ಉಪಹಾರ ಕೊಡಿಸಿ ಮಾನವೀಯತೆ ಮೆರೆದ ನಾಗರಿಕ
ಇನ್ನು ದುಃಖದಲ್ಲಿದ್ದ ಬಾಲಕ ತನ್ನ ಗ್ರಾಮ ಸಂಕನೂರ. ನನ್ನ ತಂದೆ ಜೊತೆ ಬಂದಿದ್ದೆ ಅಂತ ಹೇಳಿದ್ದಾನೆ. ಬಾಲಕನು ಹೇಳಿದ ಹಾಗೆ ಸಂಕನೂರ ಗ್ರಾಮ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವ್ಯಾಪ್ತಿಯಲ್ಲಿದ್ದು, ಬಾಲಕನನ್ನು ಸುರಕ್ಷಿತವಾಗಿ ಪೋಷಕರ ಬಳಿ ತಲುಪಿಸಲು ಅಧಿಕಾರಿಗಳು ಮುಂದಾಗಿದ್ದಾರೆ.