ಯಾದಗಿರಿ:ತಾಲೂಕಿನ ಹೆಡಗಿಮುದ್ರಾ ಗ್ರಾಮದ ಈ ಪುಟ್ಟ ಮಕ್ಕಳು ಮಾಡಿದ ಕೆಲಸ ಸಮಾಜಕ್ಕೆ ಸ್ಫೂರ್ತಿಯಾಗಿದೆ. ಪೊರಕೆ, ಸಲಿಕೆ ಹಿಡಿದುಕೊಂಡು ಗ್ರಾಮದ ಚರಂಡಿ, ರಸ್ತೆಗಳನ್ನು ಸ್ವಚ್ಛತೆ ಮಾಡಿ ಶುಚಿತ್ವದ ಕಾಳಜಿ ಮೆರೆದಿದ್ದಾರೆ.
ಪುಟ್ಟ ವಯಸ್ಸಲ್ಲಿ ಜನಮೆಚ್ಚುವ ಕೆಲಸ: ಪೊರಕೆ, ಸಲಿಕೆ ಹಿಡಿದು ಗ್ರಾಮದ ಸ್ವಚ್ಛತೆ ಮಾಡಿದ ಮಕ್ಕಳು
ಯಾದಗಿರಿ ತಾಲೂಕಿನ ಹೆಡಗಿಮುದ್ರಾ ಗ್ರಾಮದ ಚರಂಡಿ ಹಾಗೂ ವಠಾರದ ರಸ್ತೆಗಳನ್ನು ಪೊರಕೆ, ಸಲಿಕೆ ಹಿಡಿದುಕೊಂಡು ಸ್ವಚ್ಛಗೊಳಿಸುವ ಮೂಲಕ ಚಿಕ್ಕ ಮಕ್ಕಳು ಶುಚಿತ್ವದ ಕಾಳಜಿ ಮೆರೆದಿದ್ದಾರೆ.
ಗ್ರಾಮದ ಚರಂಡಿ ಹಾಗೂ ವಠಾರದ ರಸ್ತೆಗಳು ಕಳೆದ 6 ತಿಂಗಳಿಂದ ತ್ಯಾಜ್ಯ ಸಂಗ್ರಹಗೊಂಡು ದುರ್ವಾಸನೆ ಬೀರುತ್ತಿದ್ದವು. ಹೆಚ್ಚು ಮಳೆಯಾದ ಕಾರಣ ಗ್ರಾಮದ ರಸ್ತೆಗಳು ಕೆಸರು ಗದ್ದೆಯಂತಾಗಿದ್ದವು. ಗ್ರಾಮದ ಬಸ್ ನಿಲ್ದಾಣದಿಂದ ಹನುಮಾನ ಮಂದಿರದ ವರಗೆ ಚರಂಡಿ ಹಾಗೂ ರಸ್ತೆ ಮೇಲೆ ನೀರು ಸಂಗ್ರಹಗೊಂಡು ಸಾಂಕ್ರಾಮಿಕ ರೋಗದ ಭೀತಿ ಎದುರಿಸುವಂತಾಗಿತ್ತು. ಈ ರಸ್ತೆ ಮೂಲಕವೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಚಾರ ಮಾಡಿದರೂ ಸ್ವಚ್ಛತೆ ಕಡೆಗೆ ಗಮನ ಹರಿಸಿರಲಿಲ್ಲ.
ಅಶುಚಿಯನ್ನು ನೋಡಿದ ಮಕ್ಕಳು ಸ್ವತಃ ತಾವೇ ರಸ್ತೆ ಚರಂಡಿಗಳನ್ನು ಸ್ವಚ್ಛ ಮಾಡುವ ಮೂಲಕ ಸ್ವಚ್ಛತೆಯ ಅರಿವು ಮೂಡಿಸಿದ್ದಾರೆ. ಮಕ್ಕಳ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.