ಯಾದಗಿರಿ: ಅಜ್ಜಿ ಮತ್ತು ಮೊಮ್ಮಗನ ಮೇಲೆ ಬಸ್ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಹಾಪುರ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಈಟಿ ಭಾರತಕ್ಕೆ ಲಭ್ಯವಾಗಿದೆ.
ಮಹಮ್ಮದ್ ಮುಬಾರಕ್(5) ಸಾವನ್ನಪ್ಪಿದ ಬಾಲಕ. ಅಜ್ಜಿ ನೂರಹಬೇಗಂ(42)ಗೆ ಗಂಭೀರ ಗಾಯಗಳಾಗಿದೆ. ಗಾಯಾಳು ನೂರಬೇಗಂರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಬಾಲಕನ ಮೇಲೆ ಬಸ್ ಹರಿದ ದೃಶ್ಯ ಈ ಘಟನೆ ನಡೆದ ಸ್ಥಳದ ಬಳಿ ಇರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳು ಈಟಿವಿ ಭಾರತಕ್ಕೆ ಲಭ್ಯವಾಗಿದ್ದು, ಘಟನೆಯ ನೈಜ ಚಿತ್ರಣ ದೊರೆತಂತಾಗಿದೆ.
ಅಜ್ಜಿ ನೂರಹಬೇಗಂ, ಮೊಮ್ಮಗನನ್ನು ಕರೆದುಕೊಂಡು ರಸ್ತೆ ದಾಟುತ್ತಿರುವ ವೇಳೆ ಸರ್ಕಾರಿ ಬಸ್ಸಿನ ಚಾಲಕ ಕೊಂಚವೂ ಅತ್ತಿತ್ತ ಗಮನಿಸದೆ ಬಸ್ ಚಲಾಯಿಸಿದ್ದಾನೆ. ಒಂದೇ ಬಾರಿಗೆ ಬಸ್ ಅಜ್ಜಿ ಹಾಗೂ ಮೊಮ್ಮಗನ ಮೆಲೆ ಹರಿದಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಶಹಪುರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.