ಸುರಪುರ:ಗ್ರೀನ್ ಝೋನ್ ಇರುವಲ್ಲಿ ಸಾರಿಗೆ ಓಡಾಟಕ್ಕೆ ಅವಕಾಶ ನೀಡಿದ್ದರಿಂದ ನಗರದಲ್ಲಿ ಸರ್ಕಾರಿ ಸಾರಿಗೆ ಬಸ್‌ಗಳು ಬೆಳಗ್ಗೆಯೇ ರಸ್ತೆಗಿಳಿದವು. ಇನ್ನು ಮುಂಜಾಗ್ರತೆ ವಹಿಸಿ ಪ್ರಯಾಣಿಕರ ಜ್ವರ ಚೆಕ್ ಮಾಡಿ ಬಸ್ ಹತ್ತಲು ಅವಕಾಶ ನೀಡಲಾಗಿದೆ.
ಸುರಪುರದಲ್ಲಿ ಫೀವರ್ ಚೆಕ್ ಮಾಡಿದ ಬಳಿಕವೇ ಬಸ್ ಹತ್ತಲು ಅವಕಾಶ - Opportunity for transportation
ಬಸ್ ಓಡಾಟದ ಪೂರ್ವದಲ್ಲಿ ಮುಂಜಾಗ್ರತೆ ವಹಿಸಿರುವ ತಾಲೂಕು ಆರೋಗ್ಯ ಇಲಾಖೆ, ಬಸ್ ಚಾಲಕ, ನಿರ್ವಾಹಕರು ಸೇರಿದಂತೆ ಪ್ರತಿಯೊಬ್ಬ ಪ್ರಯಾಣಿಕರ ಫೀವರ್ ಚೆಕ್ ಮಾಡಿದ ನಂತರವೇ ಬಸ್ ಹತ್ತಲು ಅವಕಾಶ ನೀಡುತ್ತಿದ್ದಾರೆ.
ಬೆಳಗ್ಗೆ 6 ಗಂಟೆಗೆ ಡಿಪೋದಿಂದ ಹೊರಟ ಬಸ್‌ಗಳು ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಮೊದಲೇ ಮಾಹಿತಿ ಪಡೆದಿರುವ ಜನರು ಕೂಡ ಗ್ರಾಮೀಣ ಭಾಗದ ಪ್ರಯಾಣಕ್ಕಾಗಿ ಬಸ್ ನಿಲ್ದಾಣದಲ್ಲಿ ಕಾಯ್ದು ನಿಂತ ಜನರು ಬಸ್ ಹತ್ತಲು ತುದಿಗಾಲಲ್ಲಿ ನಿಂತಿದ್ದರು. ಬಸ್ ಓಡಾಟದ ಪೂರ್ವದಲ್ಲಿ ಮುಂಜಾಗ್ರತೆ ವಹಿಸಿರುವ ತಾಲೂಕು ಆರೋಗ್ಯ ಇಲಾಖೆ ಬಸ್‌ನ ಚಾಲಕ ನಿರ್ವಾಹಕರು ಸೇರಿದಂತೆ ಪ್ರತಿಯೊಬ್ಬ ಪ್ರಯಾಣಿಕರ ಜ್ವರ ಚೆಕ್ ಮಾಡಿದ ನಂತರವೇ ಬಸ್ ಹತ್ತಲು ಅವಕಾಶ ನೀಡುತ್ತಿದ್ದಾರೆ.
ಅಲ್ಲದೇ ಬಸ್‌ನಲ್ಲಿಯೂ ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಶೇ 50 ರಷ್ಟು ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ಬಸ್ ನಿಲ್ದಾಣದ ಕಂಟ್ರೋಲರ್ ಮಾಹಿತಿ ನೀಡಿದ್ದಾರೆ.