ಯಾದಗಿರಿ :ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯಿಂದ ಜಾತ್ರೆ, ಉತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿತ್ತು. ಈ ವರ್ಷ ಇಲ್ಲಿನ ಸಗರನಾಡಿನ ಆರಾಧ್ಯ ದೈವ ಶ್ರೀ ಚರಬಸವೇಶ್ವರರ 100 ನೇ ವರ್ಷದ ಮಹಾ ರಥೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗಿದೆ.
ರಥೋತ್ಸವಕ್ಕೆ ಬಾಡಿಯಾಳ ಶ್ರೀಗಳು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ನೆರೆದಿದ್ದ ಭಕ್ತಾದಿಗಳು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಣೆಗೈದಿದ್ದಾರೆ. ಇನ್ನು ಒಂದು ವಾರಗಳ ಕಾಲ ದೊಡ್ಡ ಪ್ರಮಾಣದ ಜಾನುವಾರು ಜಾತ್ರೆ ನಡೆಯಲಿದೆ ಎಂದು ತಿಳಿದುಬಂದಿದೆ.