ಕರ್ನಾಟಕ

karnataka

ETV Bharat / state

ಸಾಹಿತಿ ಚಂದ್ರಕಾಂತ ಕರದಳ್ಳಿ ನಿಧನ.. ಶಹಾಪುರದಲ್ಲಿ ಅಂತ್ಯಕ್ರಿಯೆ - ಸಾಹಿತಿ ಚಂದ್ರಕಾಂತ ಕರದಳ್ಳಿ ನಿಧನ

ಮಣ್ಣಲ್ಲಿ ಮಣ್ಣಾಗಿ ಹೋದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕರದಳ್ಳಿ ಅಂತಿಮ ದರ್ಶನಕ್ಕೆ ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು ಸೇರಿ ಹಲವೆಡೆಯಿಂದ ಆಗಮಿಸಿದ ಸಾಹಿತಿಗಳು ಅವರ ಅಂತಿಮ ದರ್ಶನ ಪಡೆದರು.

Chandrakantha Karandalli death
ಸಾಹಿತಿ ಚಂದ್ರಕಾಂತ ಕರದಳ್ಳಿ ನಿಧನ: ಶಹಾಪುರದಲ್ಲಿ ನೆರವೇರಿದ ಅಂತ್ಯಕ್ರಿಯೆ

By

Published : Dec 20, 2019, 9:30 PM IST

ಯಾದಗಿರಿ:ಗುರವಾರ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ ಹೆಸರಾಂತ ಸಾಹಿತಿ ಚಂದ್ರಕಾಂತ ಕರದಳ್ಳಿ ಅವರ ಅಂತ್ಯಸಂಸ್ಕಾರ ಜಿಲ್ಲೆಯ ಶಹಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಅವರ ಜಮೀನಿನಲ್ಲಿ ನೆರವೇರಿತು.

ಸಾಹಿತಿ ಚಂದ್ರಕಾಂತ ಕರದಳ್ಳಿ ನಿಧನ.. ಶಹಾಪುರದಲ್ಲಿ ನೆರವೇರಿದ ಅಂತ್ಯಕ್ರಿಯೆ

ಅಂತಿಮ ಸಂಸ್ಕಾರಕ್ಕು ಮುನ್ನ ಶಹಪುರದ ಕರದಳ್ಳಿ ನಿವಾಸದ ಬಳಿ ಬೆಳಗ್ಗೆ 10:30 ರಿಂದ 3:00 ಗಂಟೆವರೆಗೆ ಚಂದ್ರಕಾಂತ ಕರದಳ್ಳಿ ಅವರ ಪಾರ್ಥಿವ ಶರೀರವನ್ನ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಜಿಲ್ಲಾಧಿಕಾರಿ ಎಂ ಕುರ್ಮಾರಾವ್, ಶಾಸಕರಾದ ವೆಂಕಟರೆಡ್ಡಿ ಮುದ್ನಾಳ, ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಶಾಶಕ ವೀರಬಸವಂತರೆಡ್ಡಿ ಮುದ್ನಾಳ, ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಸೇರಿ ಅಪಾರ ಸಾಹಿತಿ ಬಳಗ ಕರದಳ್ಳಿ ಅವರ ಅಂತಿಮ ದರ್ಶನ ಪಡೆದು ನುಡಿ ನಮನ ಸಲ್ಲಿಸಿದರು.

ಮಧ್ಯಾಹ್ನ 3 ಗಂಟೆ ನಂತರ ಶಹಪುರದ ನಿವಾಸದಿಂದ ವಿಭೂತಿಹಳ್ಳಿ ಗ್ರಾಮದವರೆಗೆ ಟ್ರಾಕ್ಟರ್ ಮೂಲಕ ಸಾಹಿತಿ ಚಂದ್ರಕಾಂತ ಕರದಳ್ಳಿ ಅವರ ಅಂತಿಮ ಯಾತ್ರೆ ನಡೆಯಿತು‌. ಸಗರನಾಡಿನ ಹೆಸರಾಂತ ಸಾಹಿತಿಯ ಅಂತಿಮ ಯಾತ್ರೆ ವೇಳೆ ಅಪಾರ ಸಾಹಿತಿ ಬಳಗ ಯಾತ್ರೆಯುದ್ದಕ್ಕೂ ಕಣ್ಣಿರಿನ ವಿದಾಯ ಸಲ್ಲಿಸಿದ್ರು.ವಿಭೂತಿಹಳ್ಳಿ ಜಮೀನಿನಲ್ಲಿ ವೀರಶೈವ ಸಂಪ್ರದಾಯದ ವಿಧಿವಿಧಾನದಂತೆ ಕರದಳ್ಳಿ ಅಂತ್ಯಕ್ರಿಯೆ ನೆರವೇರಿತು‌.

ABOUT THE AUTHOR

...view details