ಯಾದಗಿರಿ: ಈದ್ ಮಿಲಾದ್ ಹಾಗೂ ಟಿಪ್ಪು ಸುಲ್ತಾನ್ 269 ನೇ ಜಯಂತಿ ಕಾರ್ಯಕ್ರಮವನ್ನು ಇಂದು ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ಟಿಪ್ಪು ಸುಲ್ತಾನ್ ಅಭಿಮಾನಿಗಳು ಹಮ್ಮಿಕೊಂಡಿದ್ದು ಸರ್ವಧರ್ಮೀಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಟಿಪ್ಪು ಕ್ರಾಂತಿ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ, ಯಾರು ಯಾವ ಧರ್ಮ ಜಾತಿಯಲ್ಲಿ ಹುಟ್ಟಬೇಕೆಂದು ಬಯಸುವುದಿಲ್ಲ, ವಿಧಿ ನಿಯಮದ ಹಾಗೆಯೇ ಎಲ್ಲಾ ನಡೆಯುತ್ತದೆ. ಎಲ್ಲಾ ಸಮಾಜದಲ್ಲಿಯೂ ಒಗ್ಗಟ್ಟಿನಿಂದ ಬಾಳಿ ಎಂದು ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದು ತಿಳಿಸಿದರು.