ಯಾದಗಿರಿ:ಸುರಪುರ ಪೊಲೀಸ್ ಠಾಣೆಯಲ್ಲಿ ರಂಜಾನ್ ಹಬ್ಬದ ಅಂಗವಾಗಿ ಶಾಂತಿ ಸಭೆ ನಡೆಸಿ,ಮನೆಗಳಲ್ಲಿಯೇ ಹಬ್ಬ ಆಚರಿಸುವಂತೆ ಸೂಚನೆ ನೀಡಲಾಯಿತು.
ಈ ಬಾರಿ ರಂಜಾನ್ ಹಬ್ಬವನ್ನ ಮನೆಗಳಲ್ಲಿಯೇ ಆಚರಿಸಿ.. ಸುರಪುರ ಪೊಲೀಸರಿಂದ ಮನವಿ - Surapur police in Yadagiri district
ಯಾದಗಿರಿ ಜಿಲ್ಲೆಯ ಸುರಪುರ ಪೊಲೀಸರು, ಮುಸ್ಲಿಂ ಸಮುದಾಯದ ಮೌಲ್ವಿಗಳ ಹಾಗೂ ಸಮುದಾಯದ ಮುಖಂಡರ ಸಭೆ ನಡೆಸಿ, ರಂಜಾನ್ ಹಬ್ಬವನ್ನು ಈ ಬಾರಿ ಮನೆಗಳಲ್ಲಿಯೇ ಆಚರಿಸುವಂತೆ ತಿಳಿಸಿದರು.
ಮುಂಬರುವ ರಂಜಾನ್ ಹಬ್ಬ ಆಚರಣೆ ಬಗ್ಗೆ ನಗರದ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಸಮುದಾಯದ ಮೌಲ್ವಿಗಳ ಹಾಗೂ ಸಮುದಾಯದ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ಪಿಎಸ್ಐ ಚೇತನ್ ಮಾತನಾಡಿ, ಕೊರೊನಾ ವೈರಸ್ ಭೀತಿಯಿಂದಾಗಿ ಭಾರತದಾದ್ಯಂತ ಮೇ 3ರ ವರೆಗೆ ಲಾಕ್ಡೌನ್ ಘೋಷಿಸಲಾಗಿದ್ದು,ಯಾರೂ ಹೊರಗೆ ಬರಬೇಡಿ. ರಂಜಾನ್ ಹಬ್ಬವನ್ನು ಈ ಬಾರಿ ಮನೆಗಳಲ್ಲಿಯೇ ಆಚರಿಸುವಂತೆ ತಿಳಿಸಿದರು.
ಇನ್ನು, ರಂಗಂಪೇಟೆಯಲ್ಲಿ ಯುವಕರು ಹೆಚ್ಚು ಹೊರಗಡೆ ತಿರುಗಾಡುತ್ತಾರೆ. ಹಿರಿಯರು ಇದಕ್ಕೆ ಕಡಿವಾಣ ಹಾಕಿ,ಯುವಕರು ಹೊರಗೆ ಬರದಂತೆ ತಿಳಿಸಿ. ಒಂದು ವೇಳೆ ಹೊರಗಡೆ ಬಂದವರು ಸಿಕ್ಕಲ್ಲಿ ಅವರ ಮೇಲೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು. ಮುಸ್ಲಿಂ ಸಮುದಾಯದ ಮುಖಂಡರು ಪೊಲೀಸ್ ಅಧಿಕಾರಿಗಳ ಮಾತಿಗೆ ಒಪ್ಪಿಗೆ ಸೂಚಿಸಿದರು.