ಕರ್ನಾಟಕ

karnataka

ETV Bharat / state

2 ತಿಂಗಳಿಂದ ಹಾಲು ಕದಿಯುತ್ತಿರುವ ಖದೀಮರು - ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ

By

Published : Dec 22, 2020, 1:23 PM IST

Updated : Dec 22, 2020, 1:47 PM IST

CCTV footage
ಸಿಸಿಟಿವಿ ದೃಶ್ಯಾವಳಿ

12:59 December 22

ಯಾದಗಿರಿ ಜಿಲ್ಲೆಯಲ್ಲಿ ಹಾಲಿನ ಕಳ್ಳರು ವ್ಯಾಪಾರಿಗಳ ನಿದ್ದೆಗೆಡಿಸಿದ್ದಾರೆ. ಖದೀಮರ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿ ದೃಶ್ಯಾವಳಿ

ಯಾದಗಿರಿ:ನಗರದ ಹಾಲಿನ ಪಾರ್ಲರ್​ಗಳನ್ನೇ ಟಾರ್ಗೆಟ್ ಮಾಡಿಕೊಂಡು ಹಾಲಿನ ಪಾಕೆಟ್​ಗಳನ್ನು ಕಳ್ಳತನ ಮಾಡಿ ಕೆಲ ಪುಂಡರು ಪರಾರಿಯಾಗುತ್ತಿರುವ ದೃಶ್ಯಗಳು ಈಗ ಸಿಸಿಟಿವಿಯಲ್ಲಿ ಸೆರೆಯಾಗಿವೆ. 

ಯುವಕರ ಗ್ಯಾಂಗ್ ಒಂದು ಬೈಕ್​ಗಳ ಮೂಲಕ ಆಗಮಿಸಿ ನಸುಕಿನ ಜಾವ ಹಾಲಿನ ಪಾರ್ಲರ್ ಹೊರಭಾಗದಲ್ಲಿರುವ ಹಾಲಿನ ಪಾಕೆಟ್​ಗಳನ್ನು ಕಳ್ಳತನವೆಸಗಿ ಪರಾರಿಯಾಗುತ್ತಿರುವ ಘಟನೆಯಿಂದ ನಗರದ ಹಾಲು ಮಾರಾಟಗಾರು ಕಂಗಾಲಾಗಿದ್ದಾರೆ. 

ನಗರದಲ್ಲಿ ಒಟ್ಟು 18 ಹಾಲಿನ ಪಾರ್ಲರ್​ಗಳಿದ್ದು, ದಿನೇ ದಿನೇ ಹೆಚ್ಚುತ್ತಿರುವ ಕಳ್ಳರ ಕಾಟದಿಂದ ಹಾಲು ಮಾರಾಟಗಾರರಿಗೆ ದಿಕ್ಕು ದೋಚದಂತಾಗಿದೆ. ಕಳೆದ ಎರಡು ತಿಂಗಳಿಂದ ಯುವಕರ ಗ್ಯಾಂಗ್​ವೊಂದು ಹಾಲು ಕಳ್ಳತನ ಮಾಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜಿಲ್ಲೆಯ ಜನರನ್ನ ಬೆಚ್ಚಿ ಬೀಳುವಂತೆ ಮಾಡಿದೆ.

ಕಳ್ಳರ ಕಾಟಕ್ಕೆ ಬೇಸತ್ತ ಹಾಲು ಮಾರಾಟಗಾರರು ಖದೀಮರು ಗ್ಯಾಂಗ್ ಪತ್ತೆ ಹಚ್ಚುವ ಮೂಲಕ ತಮಗಾಗುತ್ತಿರುವ ನಷ್ಟ ತಡಯಬೇಕು ಎಂದು ಕೋರಿ ಯಾದಗಿರಿ ಟೌನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 

Last Updated : Dec 22, 2020, 1:47 PM IST

ABOUT THE AUTHOR

...view details