ಕರ್ನಾಟಕ

karnataka

ETV Bharat / state

ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಕಾರ್‌ ಡಿಕ್ಕಿ: 17 ವಿದ್ಯಾರ್ಥಿಗಳಿಗೆ ಗಾಯ - ಶಾಲಾ ಮಕ್ಕಳಿದ್ದ ವಾಹನಕ್ಕೆ ಕಾರ್ ಡಿಕ್ಕಿ

ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಕಾರ್ ಡಿಕ್ಕಿಯಾಗಿದ್ದು 17 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಅಪಘಾತ
ಅಪಘಾತ

By

Published : Aug 28, 2021, 4:27 AM IST

ಗುರುಮಠಕಲ್:ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಬೊಲೆರೊ ವಾಹನವು ಕಾರ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ 17 ವಿದ್ಯಾರ್ಥಿಗಳು ಗಾಯಗೊಂಡಿದ್ದು, 7 ಜನ ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಮೂವರು ಸಾರ್ವಜನಿಕರು ಗಾಯಗೊಂಡಿದ್ದಾರೆ.

ಗುರುಮಠಕಲ್ ಹೊರವಲಯದ ಬುದೂರು ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಗೂಡ್ಸ್ ಸಾಗಿಸುವ ವಾಹನದಲ್ಲಿ ಗುಂಪು ಗುಂಪಾಗಿ ಗುರುಮಠಕಲ್ ಪಟ್ಟಣದಿಂದ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.


ಬಾರದ ಆಂಬ್ಯುಲನ್ಸ್... ಟ್ರ್ಯಾಕ್ಟರ್​ನಲ್ಲಿ ಆಸ್ಪತ್ರೆಗೆ:

ಗುರುಮಠಕಲ್‌ನಿಂದ ಕಾಲ್ನಡಿಗೆ ದೂರದಲ್ಲಿ ಸಂಭವಿಸಿದ್ದು, 108ಗೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆಂಬ್ಯುಲನ್ಸ್ ಬಾರದ ಹಿನ್ನೆಲೆ ಗಾಯಾಳುಗಳನ್ನು ಟ್ರ್ಯಾಕ್ಟರ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು.

7 ಜನ ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದು, ರಾಯಚೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಇನ್ನೂಳಿದ ವಿದ್ಯಾರ್ಥಿಗಳು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಐ ಖಾಜಾ ಹುಸೇನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details