ಸುರಪುರ: ಹುಣಸಗಿ ತಾಲೂಕಿನ ಗುಳಬಾಳ ಬಳಿಯಲ್ಲಿ ಮಂಗಳವಾರ ಸಂಜೆ ಕೃಷ್ಣಾ ಕಾಲುವೆಗೆ ಕಾರು ಉರುಳಿ ಬಿದ್ದ ಅವಘಟದಲ್ಲಿ, ಇಂದು ಕಾರು ಹಾಗೂ ಇಬ್ಬರ ಮೃತ ದೇಹ ಹೊರತೆಗೆಯಲಾಗಿದೆ.
ಕಾಲುವೆಗೆ ಉರುಳಿದ ಕಾರು: ಇಂದು ಮತ್ತೆರಡು ಮೃತ ದೇಹ ಪತ್ತೆ - car accident surapura
ಮಂಗಳವಾರ ಸಂಜೆ ಕೃಷ್ಣಾ ಕಾಲುವೆಗೆ ಕಾರು ಉರುಳಿ ಬಿದ್ದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಾರನ್ನು ಪತ್ತೆ ಹಚ್ಚಿದ್ದು, ಕಾರಿನಲ್ಲೇ ಮೃತಪಟ್ಟ ಮತ್ತಿಬ್ಬರ ದೇಹಗಳನ್ನು ಹೊರ ತೆಗೆಯಲಾಗಿದೆ.
ಎರಡು ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಬುಧವಾರದ ಸಂಜೆ ವೇಳೆಗೆ ಕಾರು ಪತ್ತೆ ಹಚ್ಚಿ ಸಾರ್ವಜನಿಕರ ಸಹಾಯದೊಂದಿಗೆ ಹೊರ ತೆಗೆದರು. ಕಾರು ಕಾಲುವೆಗೆ ಉರುಳಿದ ಸ್ಥಳದಿಂದ ತುಂಬಾ ದೂರದವರೆಗೆ ಕೊಚ್ಚಿಕೊಂಡು ಹೋಗಿ ನಿಂತಿತ್ತು. ಕಾರನ್ನು ಹೊರ ತೆಗೆದು ನೋಡಿದಾಗ, ಅದರಲ್ಲಿ ಮತ್ತಿಬ್ಬರ ಮೃತ ದೇಹ ಪತ್ತೆಯಾಗಿವೆ.
ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ಕಾರು ಚಾಲಕ ಪವನ್ ಬಿರಾದಾರ್ ಎಂಬುವರ ಮೃತದೇಹ ಪತ್ತೆಯಾಗಿತ್ತು. ಇಂದು ಮೃತ ಪವನ್ ತಂದೆ ಶರಣಗೌಡ ಬಿರಾದಾರ್ ಹಾಗೂ ತಾಯಿ ಜಾನಕಿ ಬಿರಾದಾರ್ ಅವರ ಮೃತ ದೇಹ ದೊರೆತಿವೆ. ಕಾರಿನಲ್ಲಿದ್ದ ಪವನ್ ಪತ್ನಿ ಪ್ರೇಮಾ ಹಾಗೂ ಮಗಳು ಕೃತಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.