ಕರ್ನಾಟಕ

karnataka

ETV Bharat / state

ಹೊಲದಲ್ಲಿ ಕೃಷಿ ಮಧ್ಯೆ ಗಾಂಜಾ ಬೆಳೆ: ಪೊಲೀಸರ ದಾಳಿ, ಓರ್ವನ ಬಂಧನ - CANNABIS SEIZED BY Police IN Shahapur Yadgir

ಹೊಲದಲ್ಲಿ ಕೃಷಿ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಾದಗಿರಿ ಜಿಲ್ಲೆ ಶಹಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೊಲದಲ್ಲಿ ಕೃಷಿ ಮಧ್ಯೆ ಗಾಂಜಾ ಬೆಳೆ

By

Published : Nov 8, 2019, 7:20 PM IST

ಯಾದಗಿರಿ: ಹೊಲದಲ್ಲಿ ಕೃಷಿ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಶಹಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಿಲ್ಲೆಯ ಶಹಾಪುರ ತಾಲ್ಲೂಕು ಬೆನಕನಹಳ್ಳಿ ಗ್ರಾಮದ ಹುಲಿಗೆಪ್ಪ ಮತ್ತು ಬಿದನೂರು ಗ್ರಾಮದ ಮಲ್ಲಪ್ಪ ದೊಡ್ಡಮನಿ ಎಂಬುವವರ ಹೊಲದಲ್ಲಿ ಬೆಳೆಗಳ ಮಧ್ಯೆ ಗಾಂಜಾ ಬೆಳೆಯಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಹಾಪುರ ನಗರ ಪೋಲಿಸ್ ಠಾಣೆಯ ಸಿಪಿಐ ಹನುಮಂತರೆಡ್ಡಿ ಮತ್ತು ತಹಶಿಲ್ದಾರ್​ ಜಗನ್ನಾಥ ನೇತೃತ್ವದ ತಂಡ, 150 ಕೆಜಿಗೂ ಅಧಿಕ ಹಸಿ ಗಾಂಜಾವನ್ನು ವಶಕ್ಕೆ ಪಡೆದಿದೆ.

ಗಾಂಜಾ ಬೆಳೆದ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ. ಈ ಕುರಿತು ಶಹಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details