ಯಾದಗಿರಿ :ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಮೂರು ಲಾರಿಗಳನ್ನು ತಾಲೂಕಿನ ಭೀಮರಾಯಗುಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆ ಆರೋಪ : ಮೂರು ಲಾರಿಗಳನ್ನು ವಶಕ್ಕೆ ಪಡೆದ ಪೊಲೀಸರು - ಯಾದಗಿರಿಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ
ಯಾದಗಿರಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ..
ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಗಳು ವಶಕ್ಕೆ
ಅಕ್ರಮವಾಗಿ ಅಕ್ಕಿ ಚೀಲಗಳನ್ನು ಹೊತ್ತು ಗುರುಮಠಕಲ್ ಕಡೆಯಿಂದ ಗುಜರಾತಿನ ಅಹಮದಾಬಾದ್ ಕಡೆಗೆ ಲಾರಿಗಳು ತೆರಳುತ್ತಿದ್ದವು. ಈ ಕುರಿತಂತೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮೂರು ಲಾರಿಗಳಿಂದ ಒಟ್ಟು 21.62 ಲಕ್ಷ ರೂ. ಮೌಲ್ಯದ ( 50 ಕೆಜಿ ತೂಕದ) 1,962 ಅಕ್ಕಿ ಚೀಲಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಭೀಮರಾಯನಗುಡಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಅಧಿಕಾರಿಗಳ ಕಾರ್ಯಕ್ಕೆ ಎಸ್ಪಿ ಡಾ. ಸಿಬಿ ವೇದಮೂರ್ತಿ, ಸುರಪುರ್ ವಿಭಾಗದ ಡಿವೈಎಸ್ಪಿ ಡಾ.ದೇವರಾಜ್ ಅಭಿನಂದಿಸಿದ್ದಾರೆ.