ಯಾದಗಿರಿ: ಪ್ರಧಾನಿ ಮೋದಿ ಐದು ವರ್ಷದಲ್ಲಿ ದೇಶವಾಸಿಗಳಿಗೆ ಸುಳ್ಳು ಭರವಸೆಗಳನ್ನು ನೀಡಿ ಮೋಸ ಎಸಗಿದ್ದಾರೆ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ ನಾಯಕ್ ತಿಳಿಸಿದ್ದಾರೆ.
ದೇಶವಾಸಿಗಳಿಗೆ ಮೋದಿ ಸುಳ್ಳು ಭರವಸೆಗಳನ್ನು ನೀಡಿ ಮೋಸ ಮಾಡಿದ್ದಾರೆ: ಬಿ.ವಿ ನಾಯಕ್ - Congress M P Programme
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನಸಾಮನ್ಯರಿಗೆ ದಿನ ನಿತ್ಯದ ವಸ್ತುಗಳು ಕೈಗೆಟುಕುವ ದರದಲ್ಲಿ ಸಿಗುತಯ್ತಿದ್ದವು. ನಿರುದ್ಯೋಗ ಸಮಸ್ಯೆವನ್ನು ನಿವಾರಣೆ ಮಾಡಲಾಗಿದೆ. ಆದ್ರೆ ಪ್ರಧಾನಿ ಮೋದಿಯವರ ಬಿಜೆಪಿ ಪಕ್ಷವು ಜನಸಾಮನ್ಯರ ಪಕ್ಷವಾಗದೇ ದೇಶದ ಶ್ರೀಮಂತ ಜನರ ಪರವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ವಿ ನಾಯಕ್ ಆರೋಪಿಸಿದರು.
ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಬಿ.ವಿ ನಾಯಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಪ್ರತಿವೋರ್ವ ನಾಗರಿಕರ ಖಾತೆಗೆ ಬ್ಯಾಂಕ್ನಿಂದ ಹಣವನ್ನು ನೀಡಲಾಗುವುದು ಎಂದು ಆಶ್ವಾಸನೆ ನೀಡಿ ಜನರ ಖಾತೆಗೆ ಹಣ ನೀಡದೆ ದ್ರೋಹ ಬಗೆದಿದ್ದಾರೆ ಎಂದರು.
ವರ್ಷಕ್ಕೆ ಎರಡು ಕೋಟಿ ಉದ್ಯೋಗವನ್ನು ಸೃಷ್ಟಿಸಿಸುವುದಾಗಿ ಹೇಳಿದ್ದ ಮೋದಿ ದೇಶದಲ್ಲಿ ನಿರುದ್ಯೋಗ ಸೃಷ್ಟಿಸಿದ್ದಾರೆ. ಜನಸಾಮಾನ್ಯರು ದಿನನಿತ್ಯದ ವಸ್ತುಗಳು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಜಿಎಸ್ಟಿ ತೆರಿಗೆ ಜಾರಿಗೆ ತಂದು ಬಡಜನರಿಗೆ ತೊಂದ್ರೆ ನೀಡಿದ್ದಾರೆ ಎಂದು ಬಿ ವಿ ನಾಯಕ್ ದೂರಿದರು.
TAGGED:
Congress M P Programme