ಸುರಪುರ (ಯಾದಗಿರಿ): ಬಸ್ಸಿನ ಬ್ರೇಕ್ ಫೇಲ್ ಆಗಿ ರಸ್ತೆ ಪಕ್ಕದಲ್ಲಿ ನಿಂತಿದ್ದ ನಾಲ್ವರ ಮೇಲೆ ಹರಿದಿರುವ ಘಟನೆ ಸುರಪುರ ನಗರದ ಕುಂಬಾರಪೇಟೆ ಬಳಿ ನಡೆದಿದೆ.
ಬಸ್ ಬ್ರೇಕ್ ಫೇಲ್ ಆಗಿ ಭೀಕರ ಅಪಘಾತ: ನಾಲ್ವರಿಗೆ ಗಂಭೀರ ಗಾಯ - ಸುರಪುರ ಲೇಟೆಸ್ಟ್ ನ್ಯೂಸ್
ಬಸ್ ಬ್ರೇಕ್ ಫೇಲ್ ಆಗಿ ರಸ್ತೆ ಪಕ್ಕದಲ್ಲಿ ನಿಂತಿದ್ದ ನಾಲ್ವರ ಮೇಲೆ ಹರಿದಿರುವ ಘಟನೆ ಸುರಪುರ ನಗರದ ಕುಂಬಾರಪೇಟೆ ಬಳಿ ನಡೆದಿದೆ. ಗಾಯಾಳುಗಳನ್ನ ಶಾಸಕ ನರಸಿಂಹ ನಾಯಕ ರಾಜುಗೌಡ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಸ್ ಬ್ರೇಕ್ ಫೇಲ್ ಆಗಿ ಭೀಕರ ಅಪಘಾತ: ನಾಲ್ವರಿಗೆ ಗಂಭೀರ ಗಾಯ
ಕುಂಬಾರಪೇಟೆಯ ಹನುಮಾನ್ ದೇವಸ್ಥಾನದ ಇಳಿಜಾರಿನಲ್ಲಿ ಹೋಗುವಾಗ ಬಸ್ ಬ್ರೇಕ್ ಫೇಲಾಗಿ ರಸ್ತೆ ಪಕ್ಕದಲ್ಲಿ ನಿಂತಿದ್ದ ನಾಲ್ವರ ಮೇಲೆ ಹರಿದಿದ್ದು, ಓರ್ವ ಯುವಕನ ಕೈ ತುಂಡಾಗಿದೆ. ಗಾಯಾಳುಗಳನ್ನ ಶಾಸಕ ನರಸಿಂಹ ನಾಯಕ ರಾಜುಗೌಡ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯಲ್ಲಿ ಬಸ್‌ನ ಚಕ್ರದಡಿ ಸಿಲುಕಿ ಹಸುವೊಂದು ಮೃತಪಟ್ಟಿದ್ದು, ಒಂದು ಎಮ್ಮೆಯೂ ತೀವ್ರವಾಗಿ ಗಾಯಗೊಂಡಿದೆ. ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Jan 12, 2021, 2:07 PM IST