ಕರ್ನಾಟಕ

karnataka

ETV Bharat / state

ಬಜೆಟ್​ ಹಿನ್ನೆಲೆ ಸಿಎಂ ಬಿಎಸ್​ವೈ ವಿದೇಶಿ ಪ್ರವಾಸ ರದ್ದು: ಡಿಸಿಎಂ ಕಾರಜೋಳ - ಬಜೆಟ್​ ಹಿನ್ನೆಲೆ ಸಿಎಂ ವಿದೇಶಿ ಪ್ರಯಾಣ ರದ್ದು

ಬಜೆಟ್​ ಅನುಮೋದನೆ ಕುರಿತಂತೆ ಸಭೆ, ಚರ್ಚೆ ಹಿನ್ನೆಲೆ ಸಿಎಂ ಬಿಎಸ್​ವೈ ವಿದೇಶಿ ಪ್ರವಾಸ ರದ್ದುಗೊಳಿಸಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.

DCM Govind karjol
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

By

Published : Jan 11, 2020, 12:09 PM IST

ಯಾದಗಿರಿ: ಫೆಬ್ರವರಿಯಲ್ಲಿ ಬಜೆಟ್​ಗೆ ಪೂರ್ವ ಸಿದ್ಧತೆಯಾಗಿ ಎಲ್ಲ ಇಲಾಖೆವಾರು ಸಾಮಾನ್ಯ ಸಭೆ ನಡೆಸುವ ಹಾಗೂ ಮಾರ್ಚ್​ ತಿಂಗಳಲ್ಲಿ ಬಜೆಟ್​ ಅನುಮೋದನೆ ಪಡೆಯುವ ಪ್ರಕ್ರಿಯೆ ನಡೆಯುವುದರಿಂದ ಸಿಎಂ ವಿದೇಶ ಪ್ರಯಾಣ ರದ್ದುಗೊಳಿಸಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

ಇನ್ನೂ ಉಪಚುನಾವಣೆ ವೇಳೆ ಯಾರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದು ಘೋಷಿಸಲಾಗಿದೆ. ಅವರಿಗೆ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ನೀಡಲಾಗುವುದು ಎಂದು ಹೇಳಿದರು.

ಸಚಿವ ಸ್ಥಾನ ಹಂಚಿಕೆ ವಿಷಯದಲ್ಲಿ ಬಿಜೆಪಿ ಹೈಕಮಾಂಡ್​ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಇದೇ ವೇಳೆ ಸಚಿವರು ಹೇಳಿದರು.

ABOUT THE AUTHOR

...view details