ಕರ್ನಾಟಕ

karnataka

ETV Bharat / state

ದೇವೇಗೌಡರ ಒತ್ತಡಕ್ಕೆ ಮಣಿದರೇ ಬಿಎಸ್​ವೈ? ಪಿಎಸ್​ಐ ಬಾಪುಗೌಡ ವರ್ಗಾವಣೆ - ಮುಖ್ಯಮಂತ್ರಿ ನಿವಾಸದ ಎದುರುಗಡೆ ಪ್ರತಿಭಟನೆ

ಜೆಡಿಎಸ್ ಕಾರ್ಯಕರ್ತನ ಮೇಲೆ ಪಿಎಸ್ಐ ಬಾಪುಗೌಡ ದೌರ್ಜನ್ಯವೆಸಗಿದ ಸಂಬಂಧ ಅವರನ್ನು ವರ್ಗಾವಣೆ ಮಾಡುವುದರ ಜೊತೆಗೆ ರಜೆಯಲ್ಲಿ ತೆರಳುವಂತೆ ಸಿಎಂ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹೆಚ್​ಡಿಡಿ ಒತ್ತಡಕ್ಕೆ ಮಣಿದ ಬಿಎಸ್​ವೈ

By

Published : Nov 6, 2019, 7:18 PM IST

ಯಾದಗಿರಿ:ಜೆಡಿಎಸ್ ಕಾರ್ಯಕರ್ತನ ಮೇಲೆ ಪಿಎಸ್ಐ ಬಾಪುಗೌಡ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಹಿನ್ನೆಲೆ ಅವರನ್ನು ವರ್ಗಾವಣೆ ಮಾಡಿ ಹಾಗೂ ರಜೆ ಮೇಲೆ ತೆರಳುವಂತೆ ಸರ್ಕಾರ ಆದೇಶ ಹೊರಡಿಸಿದೆ ಎನ್ನಲಾಗಿದೆ.

ಜೆಡಿಎಸ್ ಕಾರ್ಯಕರ್ತನ ಮೇಲೆ ಪಿಎಸ್ಐ ಬಾಪುಗೌಡ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಕಾರ್ಯಕರ್ತರೊಂದಿಗೆ ಸೇರಿ ಖುದ್ದು ಹೆಚ್. ಡಿ. ದೇವೇಗೌಡರೇ ಪಿಎಸ್ಐ ಬಾಪುಗೌಡರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಯಾದಗಿರಿಯಲ್ಲಿ ಅಕ್ಟೋಬರ್ 23 ರಂದು ಪ್ರತಿಭಟನೆ ನಡೆಸಿದ್ದರು.

ಪಿಎಸ್​ಐ ಬಾಪುಗೌಡ ವರ್ಗಾವಣೆ

ಒಂದ್ವೇಳೆ ಪಿಎಸ್ಐ ಬಾಪುಗೌಡ ಅಮಾನತು ಮಾಡದಿದ್ರೆ ನವೆಂಬರ್ 15 ರಂದು ಮುಖ್ಯಮಂತ್ರಿ ನಿವಾಸದ ಎದುರುಗಡೆ ಪ್ರತಿಭಟಿಸೋದಾಗಿ ದೇವೇಗೌಡರೇ ಎಚ್ಚರಿಕೆ ನೀಡಿದ್ದರು. ಹಾಗಾಗಿ ಸಿಎಂ ಯಡಿಯೂರಪ್ಪ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಒತ್ತಡಕ್ಕೆ ಮಣಿದು ಪೊಲೀಸ್ ಅಧಿಕಾರಿಯ ವರ್ಗಾವಣೆ ಮಾಡಿದ್ದಾರಾ ಎಂಬ ಆರೋಪ ಕೇಳಿ ಬರುತ್ತಿದೆ.

ಈ ಸಂಬಂಧ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ ಸೋನಾವಣೆ ಮಾತನಾಡಿ, ನಮ್ಮ ಇಲಾಖೆಯಿಂದ ಪಿಎಸ್​​ಐ ಬಾಪುಗೌಡರ ವರ್ಗಾವಣೆ ಕುರಿತು ಯಾವುದೇ ಆದೇಶ ಬಂದಿಲ್ಲ ಎಂದು ಸ್ಪಷ್ಟನೆ ನೀಡದ್ದಾರೆ.

ಈ ಸಂಬಂಧ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಸಬ್‌ಇನ್​​ಸ್ಪೆಕ್ಟರ್ ಬಾಪುಗೌಡ ಪಾಟೀಲ್ ಅವರನ್ನು ವರ್ಗಾವಣೆಗೊಳಿಸಿರುವ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ABOUT THE AUTHOR

...view details