ಕರ್ನಾಟಕ

karnataka

ETV Bharat / state

ಬೈಕ್​ ಅಪಘಾತ: ಕೈ ಕಾಲು ಕಳೆದುಕೊಂಡು ಗಂಟೆಗಟ್ಟಲೇ ರಸ್ತೆಯಲ್ಲೇ ನರಳಾಡಿದ ಯುವಕ - ಬೈಕ್​ ಅಪಘಾತದಲ್ಲಿ ಕೈ ಕಾಲು ಕಳೆದುಕೊಂಡ ಯುವಕ

ಯುವಕನೋರ್ವ್​ ಬೈಕ್​ ಅಪಘಾತದಲ್ಲಿ ಕೈ ಕಾಲು ಕಳೆದುಕೊಂಡು ಗಂಟೆಗಟ್ಟಲೇ ರಸ್ತೆಯಲ್ಲೇ ಒದ್ದಾಡಿದ ಪ್ರಕರಣ ಯಾದಗಿರಿಯಲ್ಲಿ ಜಿಲ್ಲೆಯಲ್ಲಿ ನಡೆದಿದೆ.

boy lost his hand and leg in a byke accident
ಬೈಕ್​ ಅಪಘಾತ

By

Published : Dec 15, 2020, 11:11 AM IST

ಸುರಪುರ/ಯಾದಗಿರಿ:ಸುರಪುರ ತಾಲೂಕಿನ ಹಾವಿನಾಳ ಕ್ರಾಸ್ ಬಳಿ ಬೈಕ್ ಅಪಘಾತದಲ್ಲಿ ಕೈ ಕಾಲು ಕಳೆದುಕೊಂಡು ಯುವಕನೋರ್ವ ಗಂಟೆಗಳ ಕಾಲ ನರಳಿದ ಹೃದಯ ವಿದ್ರಾವಕ ಘಟನೆ ಜರುಗಿದೆ.

ಸುರಪುರ ನಗರದ ರಂಗಂಪೇಟೆಯ ಧೂಳಪೇಟ್ ನಿವಾಸಿಯಾದ ಅಯಾಜ್ (35), ಸೋಮವಾರ ರಾತ್ರಿ ತನ್ನ ಬೈಕ್​ನಲ್ಲಿ ಹುಣಸಿಗಿ ಕಡೆಯಿಂದ ಬರುವಾಗ ಎದುರಿನಿಂದ ಬಂದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತನ್ನ ಎಡಗೈ ಮತ್ತು ಎಡಗಾಲು ಮುರಿದಿದ್ದರಿಂದ ರಸ್ತೆಯಲ್ಲೇ ಬಿದ್ದು ನರಳಾಡಿದ್ದಾನೆ. ಅಪಘಾತ ನಡೆದು ಒಂದು ಗಂಟೆಯಾದರೂ ಯಾರೂ ಆಸ್ಪತ್ರೆಗೆ ಸಾಗಿಸಲು ಮುಂದಾಗಿಲ್ಲ. ಕೊನೆಗೆ ಸರ್ಕಾರಿ ಆಸ್ಪತ್ರೆಗೆ ಕರೆ ಮಾಡಿ ವಿಷಯ ತಿಳಿಸಿದಾಗ 108 ಆ್ಯಂಬುಲೆನ್ಸ್​ ಬರುವುದು ವಿಳಂಬವಾಗಿದ್ದರಿಂದ ಮತ್ತಷ್ಟು ತೊಂದರೆ ಪಟ್ಟಿದ್ದಾನೆ.

ಕೊನೆಗೆ 'ಈಟಿವಿ ಭಾರತ' ವರದಿಗಾರ ತಾಲೂಕು ಆರೋಗ್ಯಾಧಿಕಾರಿ ಆರ್.ವಿ. ನಾಯಕ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಬೇರೆ ಆ್ಯಂಬುಲೆನ್ಸ್ ಕಳಿಸಿ ನಂತರ ಗಾಯಾಳುವನ್ನು ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನಂತರ ಅಯಾಜ್‌ನನ್ನು ಕಲಬುರಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಹಾವೇರಿ ಕಾರಾಗೃಹದಲ್ಲಿ ಜೈಲು ಅಧೀಕ್ಷಕ ಮತ್ತು ಜೈಲು ಸಿಬ್ಬಂದಿ ನಡುವೆ ಡಿಶುಂ.. ಡಿಶುಂ!

ABOUT THE AUTHOR

...view details