ಕರ್ನಾಟಕ

karnataka

ETV Bharat / state

ಯಾದಗಿರಿ ಬಡ ಕುಟುಂಬಕ್ಕೆ ಸಹಾಯ ಮಾಡಿದ 'ಕಲಿಯುಗದ ಕರ್ಣ' ಹೇಳಿದ್ದೇನು ಗೊತ್ತಾ? - ಬಾಲಿವುಡ್​ ನಟ ಸೋನು ಸೂದ್​ ಸಹಾಯ,

ಯಾದಗಿರಿ ಬಡ ಕುಟುಂಬಕ್ಕೆ ಸಹಾಯ ಮಾಡಿದ ಬಾಲಿವುಡ್​ ನಟ ಸೋನು ಸೂದ್​ ವಿಡಿಯೋ ಸಂದೇಶವನ್ನು ರವಾನಿಸಿದ್ದಾರೆ.

Sonu Sood talk about Yadagiri family, Bollywood actor Sonu Sood talk about Yadagiri family, Sonu Sood talk about Yadagiri family news, Bollywood actor Sonu Sood, Bollywood actor Sonu Sood help, Bollywood actor Sonu Sood help news, ಯಾದಗಿರಿ ಕುಟುಂಬದ ಬಗ್ಗೆ ಮಾತನಾಡಿದ ಸೋನು ಸೂದ್​,  ಯಾದಗಿರಿ ಕುಟುಂಬದ ಬಗ್ಗೆ ಮಾತನಾಡಿದ ಸೋನು ಸೂದ್ ಸುದ್ದಿ, ಬಾಲಿವುಡ್​ ನಟ ಸೋನು ಸೂದ್​, ಬಾಲಿವುಡ್​ ನಟ ಸೋನು ಸೂದ್​ ಸಹಾಯ, ಬಾಲಿವುಡ್​ ನಟ ಸೋನು ಸೂದ್​ ಸಹಾಯ ಸುದ್ದಿ,
ಯಾದಗಿರಿ ಬಡ ಕುಟುಂಬಕ್ಕೆ ಸಹಾಯ ಮಾಡಿದ ಕಲಿಯುಗದ ಕರ್ಣ ಹೇಳಿದ್ದೇನು

By

Published : Aug 27, 2020, 2:47 PM IST

ಯಾದಗಿರಿ:ಕೊಟ್ಟ ಮಾತಿನಂತೆ ಬಾಲಿವುಡ್‌ನ ಖ್ಯಾತ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಯಾದಗಿರಿ ಜಿಲ್ಲೆ ರಾಮಸಮುದ್ರ ಗ್ರಾಮದ ಬಡ ದಂಪತಿಗಳ ಕುಟುಂಬಕ್ಕೆ ನೆರವು ನೀಡಿದ್ದಾರೆ.

ಯಾದಗಿರಿ ಬಡ ಕುಟುಂಬಕ್ಕೆ ಸಹಾಯ ಮಾಡಿದ ಕಲಿಯುಗದ ಕರ್ಣ ಹೇಳಿದ್ದೇನು ಗೊತ್ತಾ?

ಕಳೆದ ನಾಲ್ಕೈದು ದಿನಗಳ ಹಿಂದೆ ರಾಮಸಮುದ್ರ ಗ್ರಾಮದ ನಾಗರಾಜ್ ಮತ್ತು ಪದ್ಮ ದಂಪತಿಗೆ ಮುದ್ದಾದ ತ್ರಿವಳಿ ಗಂಡು ಮಕ್ಕಳು ಜನಿಸಿದ್ದವು. ಆದರೆ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಪತಿ, ಪತ್ನಿ ಮೂವರು ಮಕ್ಕಳಿಗೆ ಚಿಕಿತ್ಸೆ ಕೊಡಿಸುವುದೂ ಸೇರಿದಂತೆ ಜೀವನ ನಿರ್ವಹಣೆ ಮಾಡೊದು ಹೇಗೆ? ಎಂಬ ಚಿಂತೆಯಲ್ಲಿದ್ದರು. ಇದನ್ನು ಗಮನಿಸಿದ ಸ್ಥಳೀಯ ಪತ್ರಕರ್ತ ಮಲ್ಲಿಕಾರ್ಜುನ ಹತ್ತಿಕೂಣಿ ಎಂಬುವರು, ಬಾಲಿವುಡ್ ನಟ ಸೋನು ಸೂದ್ ಗಮನಕ್ಕೆ ತಂದು‌ ಸಹಾಯ ಮಾಡಿ ಅಂತ ವಾಟ್ಸ್ ಆ್ಯಪ್ ಮೂಲಕ ಮನವಿ ಮಾಡಿಕೊಂಡಿದ್ದರು.

ಇದಕ್ಕೆ ಸ್ಪಂದಿಸಿದ್ದ ಸೋನು ಸೂದ್, ಕುಟುಂಬಕ್ಕೆ ನೆರವು ನೀಡುವುದಾಗಿ ಮತ್ತು ಮಕ್ಕಳಿಗೆ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆ ಅಮೆಜಾನ್ ಕೋರಿಯರ್ ಮೂಲಕ ನಾಗರಾಜ್ ಕುಟುಂಬಕ್ಕೆ ಅಕ್ಕಿ, ಬೆಳೆ, ಎಣ್ಣೆ, ಸಕ್ಕರೆ, ಸಾಬೂನು, ಕಂದಮ್ಮಗಳಿಗೆ ಬೇಕಾಗುವ ಸಾಮಗ್ರಿ ಸೇರಿದಂತೆ ಹಲವು ಗೃಹೋಪಯೋಗಿ ವಸ್ತುಗಳನ್ನು ಅವರು ರವಾನಿಸಿದ್ದಾರೆ.

ಖುದ್ದಾಗಿ ಸೋನು ಸೂದ್ ವಿಡಿಯೋ ಒಂದನ್ನು ವಾಟ್ಸ್ ಆ್ಯಪ್ ಮಾಡುವ ಮೂಲಕ ಕುಟುಂಬಕ್ಕೆ ಶುಭ ಕೋರಿದ್ದಾರೆ. ಈ ವಿಡಿಯೋ ಮೂಲಕ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದ ಅವರು, ಮುಂದೆಯೂ ಈ ಮಕ್ಕಳಿಗೆ ನೆರವಾಗುವುದಾಗಿ ಭರವಸೆ ನೀಡಿದ್ದಾರೆ.

ಸ್ಥಳೀಯರೂ ಸೇರಿದಂತೆ ಯುವಜನತೆ ಮುಂದೆ ಬಂದು ಈ ಬಡ ಕುಟುಂಬಕ್ಕೆ ಸಹಾಯ‌ ಮಾಡುವ ಮೂಲಕ ಸಮಾಜಮುಖಿ ಕೆಲಸಕ್ಕೆ ಮುಂದಾಗಬೇಕು ಅಂತ ಸೂದ್ ಕಳಿಸಿದ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸೋನು ಸೂದ್ ಸಹಾಯಕ್ಕೆ ನಾಗರಾಜ್ ಕುಟುಂಬ ಧನ್ಯವಾದ ತಿಳಿಸಿದೆ.

ಕೊರೊನಾ ಸಂದರ್ಭದಲ್ಲಿ ಬಡ ಕೂಲಿ ಕಾರ್ಮಿಕರಿಗೆ ತಮ್ಮ ತಮ್ಮ ಊರುಗಳಿಗೆ ತೆರಳಲು ಅನುವು ಮಾಡಿಕೊಟ್ಟಿದ್ದ ಬಾಲಿವುಡ್ ನಟ, ಇದೀಗ ಬಡ ಕುಟುಂಬವೊಂದಕ್ಕೆ ಸಹಾಯ ಮಾಡುವ ಮಾನವೀಯತೆ ಮೆರೆದಿದ್ದಾರೆ.

ABOUT THE AUTHOR

...view details