ಯಾದಗಿರಿ:ಕಾರ್ಮಿಕರು ಕೆಲಸ ಮಾಡುತ್ತಿರುವ ವೇಳೆ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ 8 ಜನ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: 8 ಜನರಿಗೆ ಗಂಭೀರ ಗಾಯ - ಕಡೇಚೂರ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟ
ಯಾದಗಿರಿ ಜಿಲ್ಲೆಯ ಕಡೇಚೂರ ಬಳಿಯ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡಿದ್ದು, 8 ಜನ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
![ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: 8 ಜನರಿಗೆ ಗಂಭೀರ ಗಾಯ Laborers](https://etvbharatimages.akamaized.net/etvbharat/prod-images/768-512-6359513-thumbnail-3x2-vicky.jpg)
ಗಾಯಗೊಂಡಿರುವ ಕಾರ್ಮಿಕರು
ಕಾರ್ಖಾನೆಯಲ್ಲಿ ಬಾಯ್ಲರ್ ಸಿಡಿದು ಅವಘಡ
ಹೊಸ ಕಾರ್ಖಾನೆಯ ಘಟಕದಲ್ಲಿ ಟೈಯರ್ ರಿವೆಲ್ಡಿಂಗ್ ಮಾಡುತ್ತಿರುವ ವೇಳೆ ದುರ್ಘಟನೆ ಸಂಭವಿಸಿದೆ. ಬಾಯ್ಲರ್ ನಲ್ಲಿದ್ದ ಬಿಸಿ ತೈಲ ಸಿಡಿದು ಕಾರ್ಮಿಕರ ಮೈಗೆ ಬಿದ್ದಿದೆ. ಪರಿಣಾಮ ಕಾರ್ಮಿಕರ ಮೈ ಕೈ ಸುಟ್ಟು ಹೋಗಿದೆ. ಘಟನೆಯಲ್ಲಿ ಗಾಯಗೊಂಡ ಕಾರ್ಮಿಕರು ಕಡೇಚೂರ ಗ್ರಾಮದವರಾಗಿದ್ದು, ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಹುಸೇನ್, ಆರೀಫ್, ಇಮ್ರಾನ್ ಹಾಗೂ ಸಮೀರ್ ಸೇರಿದಂತೆ ಆರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated : Mar 10, 2020, 6:29 PM IST