ಯಾದಗಿರಿ: ನೂರಾರು ಜನರ ಸಮ್ಮುಖದಲ್ಲಿ, ಠಾಣೆಯಲ್ಲಿಯೇ ನಡೆದ ಪಿಎಸ್ಐ ಒಬ್ಬರ ಜನ್ಮದಿನದ ಸಂಭ್ರಮಾಚರಣೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಠಾಣೆಯಲ್ಲೇ ಪಿಎಸ್ಐ ಹುಟ್ಟುಹಬ್ಬ: ಕೊರೊನಾತಂಕದಲ್ಲಿರುವ ಸಾರ್ವಜನಿಕರ ಆಕ್ರೋಶ - Police Station in Yadgir
ಪಿಎಸ್ಐ ಸೌಮ್ಯ ಅವರ ಹುಟ್ಟು ಹಬ್ಬವನ್ನು ನಿನ್ನೆ ರಾತ್ರಿ ಪೊಲೀಸ್ ಠಾಣೆಯಲ್ಲಿಯೇ ಆಚರಿಸಲಾಗಿದೆ. ಆ ವೇಳೆ ಹಲವಾರು ಸಾರ್ವಜನಿಕರು ಭಾಗಿಯಾಗಿದ್ದು, ಸಾಮಾಜಿಕ ಅಂತರ ಉಲ್ಲಂಘನೆ ಮಾಡಿದ್ದಾರೆ.

ನಗರ ಠಾಣೆಯ ಪಿಎಸ್ಐ ಸೌಮ್ಯ ಅವರ ಹುಟ್ಟು ಹಬ್ಬವನ್ನು ನಿನ್ನೆ ರಾತ್ರಿ ಪೊಲೀಸ್ ಠಾಣೆಯಲ್ಲಿಯೇ ಆಚರಿಸಲಾಗಿದೆ. ಪಿಎಸ್ಐ ಜನ್ಮದಿನದ ಸಂಭ್ರಮಚರಣೆಯಲ್ಲಿ ನೂರಾರು ಜನ ಭಾಗಿಯಾಗಿದ್ದಾರೆ. ಆ ವೇಳೆ ಕೆಲವರು ಮಾಸ್ಕ್ ಕೂಡ ಧರಿಸದೆ, ಸಾಮಾಜಿಕ ಅಂತರ ಉಲ್ಲಂಘಿಸಿದ್ದು, ಈ ಘಟನೆ ಸಾರ್ವಜನಿಕರ ಕಂಗಣ್ಣಿಗೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದ ಈಗಾಗಲೇ ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ. ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ ಸಾಕಷ್ಟು ಶ್ರಮ ವಹಿಸಿತ್ತು. ಆದರೆ, ನಿನ್ನೆ ನಡೆದ ನಗರ ಠಾಣೆ ಪಿಎಸ್ಐ ಜನ್ಮದಿನ ಸಂಭ್ರಮಾಚರಣೆಯಿಂದ ಕೊರೊನಾ ಭೀತಿ ಎದುರಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.