ಯಾದಗಿರಿ:ಬೈಕ್ ಕಳ್ಳತನ ಮಾಡಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಚಾಲಾಕಿ ಕಳ್ಳರಿಬ್ಬರನ್ನ ಶಹಪುರ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಖದೀಮ ಕಳ್ಳರಿಂದ ಲಕ್ಷಾಂತರ ರೂ. ಬೆಲೆಬಾಳುವ ಬೈಕ್ಗಳನ್ನ ವಶಪಡಿಸಿಕೊಂಡಿದ್ದಾರೆ.
ಚಾಲಾಕಿ ಬೈಕ್ ಕಳ್ಳರ ಹಿಡಿಯುವಲ್ಲಿ ಯಶಸ್ವಿ... ನಾಲ್ಕು ಬೈಕ್ ಸೇರಿ 12 ಮೊಬೈಲ್ ವಶ - ಕಾಸಿಂ ಗರೆಬಾಳ ಮತ್ತು ಗಂಗಪ್ಪ ಗರೆಬಾಳ
ಬೈಕ್ ಕಳ್ಳತನ ಮಾಡಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಚಾಲಾಕಿ ಕಳ್ಳರಿಬ್ಬರನ್ನ ಯಾದಗಿರಿಯ ಶಹಪುರ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಲಾಕಿ ಬೈಕ್ ಕಳ್ಳರ ಸೆರೆಯಲ್ಲಿ ಯಶಸ್ವಿಯಾದ್ರು ಪೊಲೀಸ್ರು
ಖಾಸೀಂ ಗರೆಬಾಳ ಮತ್ತು ಗಂಗಪ್ಪ ಗರೆಬಾಳ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಎರಡು ಪಲ್ಸರ್ ಮತ್ತು ಎರಡು ಸ್ಪ್ಲೆಂಡರ್ ಬೈಕ್ ಸೇರಿದಂತೆ ಒಟ್ಟು ನಾಲ್ಕು ಬೈಕ್ ಮತ್ತು 12 ಮೊಬೈಲ್ಗಳನ್ನ ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಹುಣಸಗಿ ಪಟ್ಟಣದ ನಿವಾಸಿಗಳಾದ ಖಾಸೀಂ ಮತ್ತು ಗಂಗಪ್ಪ ಕಳ್ಳತನವನ್ನೇ ಪ್ರವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಬಂಧಿತರಿಂದ 2 ಲಕ್ಷ 37 ಸಾವಿರ ರೂ ಮೌಲ್ಯದ ಬೈಕ್ಗಳ ಜೊತೆ ಮೊಬೈಲ್ಗಳನ್ನ ವಶಪಡಿಸಿಕೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಶಹಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.