ಕರ್ನಾಟಕ

karnataka

ETV Bharat / state

24ನೇ ವಯಸ್ಸಿಗೆ ಸನ್ಯಾಸತ್ವ ಸ್ವೀಕರಿಸಿದ ಬಿಕಾಂ ಪದವೀಧರೆ! - ಸನ್ಯಾಸತ್ವ ಸ್ವೀಕರಿಸಿದ ಬಿಕಾಂ ಪದವೀಧರೆ

ಸುರಪುರ ಪಟ್ಟಣದ ಖ್ಯಾತ ಉದ್ಯಮಿಯೊಬ್ಬರ ಪುತ್ರಿ ಮೋನಿಕಾ ಜೈನ್ ತಮ್ಮ 24ನೇ ವಯಸ್ಸಿನಲ್ಲೆ ಸನ್ಯಾಸತ್ವ ಸ್ವೀಕರಿಸಿ ಅಚ್ಚರಿ ಮೂಡಿಸಿದ್ದಾರೆ.

B.com Graduate become hermit in the age of 24 years
ಸನ್ಯಾಸತ್ವ ಸ್ವೀಕರಿಸಿದ ಬಿಕಾಂ ಪದವೀಧರೆ

By

Published : Feb 2, 2020, 4:13 AM IST

ಯಾದಗಿರಿ: ಸುರಪುರ ಪಟ್ಟಣದ ಬಿಕಾಂ ಪದವೀಧರೆ ಮೋನಿಕಾ ಎಂಬ ಯುವತಿ ತನ್ನ 24ನೇ ವಯಸ್ಸಿನಲ್ಲೆ ಸನ್ಯಾಸತ್ವ ಸ್ವೀಕರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮೋನಿಕಾ ಜೈನ್

ಪಟ್ಟಣದ ಖ್ಯಾತ ಉದ್ಯಮಿ ಪುತ್ರಿ ಮೋನಿಕಾ ಜೈನ್ ಅವರು ಶನಿವಾರ ಧಾರ್ಮಿಕ ವಿಧಿವಿಧಾನ ಪೂರ್ಣಗೊಳಿಸಿ ರಾಜಸ್ತಾನದ ಜಾಲೋರ್ ಜಿಲ್ಲೆಯ ಬಾಕ್ರಾರೋಡ್​ನ ಪಾರ್ಶ್ವನಾಥ ತೀರ್ಥಂಕರ ದೇಗುಲದಲ್ಲಿ ಜೈನ ಮುನಿಗಳ ಸಾನಿಧ್ಯದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರೆ.

ಮೋನಿಕಾ ಜೈನ್

ಶನಿವಾರ ಬೆಳಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳ ನಡೆದಿದ್ದು, ಮೋನಿಕಾ ಅವರು ಜೈನ ಮುನಿ ದಯಾನಂದ ಸೂರಿಜಿ ಸಾನಿಧ್ಯದಲ್ಲಿ ಸನ್ಯಾಸತ್ವ ಸ್ವೀಕರಿಸಿದರು. ಮೋನಿಕಾ ಅವರರಿಗೆ ದೀಕ್ಷಿತ್ ಸಾಧ್ವಿಜಿ ಶ್ರೀ ವಿಭುವೈಶಾ ಎಂದು ನಾಮಕರಣ ಮಾಡಿ ಸನ್ಯಾಸ ದೀಕ್ಷೆ ನೀಡಿದರು. ಸನ್ಯಾತ್ವ ಸ್ವೀಕಾರ ಕಾರ್ಯಕ್ರಮದಲ್ಲಿ ಮೋನಿಕಾ ಕುಟುಂಬಸ್ಥರು ಕೂಡ ಭಾಗಿಯಾಗಿದ್ದರು.

ಕಳೆದ ಡಿಸೆಂಬರ್ 12 ರಂದು ಮೋನಿಕಾ ಅವರು ಸನ್ಯಾಸತ್ವ ಸ್ವೀಕರಿಸಿ ಸುರಪುರ ಪಟ್ಟಣದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸುವ ಜೊತೆಗೆ ಮೆರವಣಿಗೆ ವೇಳೆ ಸಾರ್ವಜನಿಕರಿಗೆ ವಿವಿಧ ವಸ್ತುಗಳನ್ನು ದಾನ ನೀಡಿದ್ದರು.

ABOUT THE AUTHOR

...view details