ಸುರಪುರ:ಬಸವಸಾಗರ ಜಲಾಶಯ ಭರ್ತಿಯಾಗಿದ್ದು ಕೃಷ್ಣಾ ನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಬಸವಸಾಗರ ಜಲಾಶಯ ಭರ್ತಿ: ನದಿಪಾತ್ರದ ಜನರಿಗೆ ಪ್ರವಾಹ ಭೀತಿ - ಬಸವಸಾಗರ ಜಲಾಶಯ ಭರ್ತಿ
ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯದಲ್ಲಿ ನೀರಿನ ಒಳ ಹರಿವು ಅಧಿಕವಾದ ಹಿನ್ನೆಲೆ, ನೀರನ್ನು ಹೊರಬಿಡಲಾಗಿದ್ದು, ನದಿ ಪಾತ್ರದ ಜನರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ.
ಬಸವಸಾಗರ ಜಲಾಶಯ
ಬಸವಸಾಗರ ಜಲಾಶಯದಲ್ಲಿ ನೀರಿನ ಒಳ ಹರಿವು ಹೆಚ್ಚಾದ ಹಿನ್ನೆಲೆ, ಕೃಷ್ಣಾ ನದಿಗೆ 2 ಲಕ್ಷದ 20 ಸಾವಿರ ಕ್ಯುಸೆಕ್ ನೀರು ಹರಿಬಿಡಲಾಗಿದ್ದು, ಜಿಲ್ಲೆಯಲ್ಲಿನ ನದಿ ತೀರದ ಪ್ರದೇಶದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ತೀವ್ರವಾಗಿ ಮಳೆಯಾಗಿದ್ದು, ಈಗಾಗಲೇ ಕೃಷ್ಣ ನದಿ ಭೋರ್ಗರೆಯಲು ಪ್ರಾರಂಭಿಸಿದೆ.
ನದಿ ತೀರಕ್ಕೆ ತೆರಳದಂತೆ ಹಾಗೂ ನದಿ ಪಾತ್ರದ ಜನರು ಈ ಕೂಡಲೇ ತಮ್ಮ ಪ್ರದೇಶದಿಂದ ಸೂಕ್ತ ಸ್ಥಳಗಳಿಗೆ ತೆರಳಲು ಯಾದಗಿರಿ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಸೂಚನೆ ನೀಡಿದ್ದಾರೆ.