ಕರ್ನಾಟಕ

karnataka

ETV Bharat / state

ಯಾದಗಿರಿ ಎಪಿಎಂಸಿಗೆ ಬಸವಲಿಂಗಪ್ಪ ನಾಯಕ ಬೆಳಗುಂದಿ ಅಧ್ಯಕ್ಷ..

ಒಟ್ಟು16 ಸದಸ್ಯರ ಬಲವಿದ್ದು, ಈ ಎಲ್ಲಾ ಸದಸ್ಯರು ತಮ್ಮ ಮತ ಚಲಾಯಿಸಿದರು. ಬಸವಲಿಂಗಪ್ಪ ನಾಯಕ ಬೆಳಗುಂದಿ‌ ಅವರಿಗೆ 9 ಮತ ಲಭಿಸಿದ್ರೆ, ಅವರ ಪ್ರತಿಸ್ಪರ್ಧಿ ಅನಂತಪ್ಪ ಯದ್ಲಾಪೂರ್ ಅವರು 7 ಮತ ಪಡೆದರು. 2 ಮತಗಳ ಅಂತರದಿಂದ ಬೆಳಗುಂದಿ ಅಧ್ಯಕ್ಷರಾಗಿ ಆಯ್ಕೆಯಾದರು.

Apmc election
Apmc election

By

Published : Jun 6, 2020, 5:36 PM IST

ಯಾದಗಿರಿ :ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸೈದಾಪುರ ಮತಕ್ಷೇತ್ರದ ಸದಸ್ಯ ಬಸವಲಿಂಗಪ್ಪ ನಾಯಕ ಬೆಳಗುಂದಿ ಹಾಗೂ ಉಪಾಧ್ಯಕ್ಷರಾಗಿ ಬಿ ಭೀಮರೆಡ್ಡಿ ಮುದ್ನಾಳ್ ಆಯ್ಕೆಯಾದರು.

ನಗರದ ಸಮಿತಿಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಸವಲಿಂಗಪ್ಪ ನಾಯಕ ಬೆಳಗುಂದಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅನಂತಪ್ಪ ಯದ್ಲಾಪೂರ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಭೀಮರೆಡ್ಡಿ ಮುದ್ನಾಳ್ ಹಾಗೂ ರಂಜನಾ ದೇವಿ ನಾಮಪತ್ರ ಸಲ್ಲಿಸಿದ್ದರು. ಸಭೆಯಲ್ಲಿ ಒಟ್ಟು16 ಸದಸ್ಯರ ಬಲವಿದ್ದು, ಈ ಎಲ್ಲಾ ಸದಸ್ಯರು ತಮ್ಮ ಮತ ಚಲಾಯಿಸಿದರು. ಬಸವಲಿಂಗಪ್ಪ ನಾಯಕ ಬೆಳಗುಂದಿ‌ ಅವರಿಗೆ 9 ಮತ ಲಭಿಸಿದ್ರೆ, ಅವರ ಪ್ರತಿಸ್ಪರ್ಧಿ ಅನಂತಪ್ಪ ಯದ್ಲಾಪೂರ್ ಅವರು 7 ಮತ ಪಡೆದರು. 2 ಮತಗಳ ಅಂತರದಿಂದ ಬೆಳಗುಂದಿ ಅಧ್ಯಕ್ಷರಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಭೀಮರೆಡ್ಡಿ ಮುದ್ನಾಳ್ 10 ಮತ ಪಡೆದರು. ರಂಜನಾ ದೇವಿ 6 ಮತ ಪಡೆದರು. ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಚನ್ನಮಲ್ಲಪ್ಪ ಅವರುಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆ ಮಾಡಿದರು. ನಂತರ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಶಾಸಕ ವೆಂಕಟರೆಡ್ಡಿ‌ ಮುದ್ನಾಳ್, ಮಾಜಿ ಶಾಸಕ‌ ಡಾ.ವೀರಬಸವಂತರೆಡ್ಡಿ ಮುದ್ನಾಳ್, ಸಿದ್ದಪ್ಪ ಹೊಟ್ಟಿ, ಬಸಪ್ಪಗೌಡ ಬೆಳಗುಂದಿ, ಭೀಮಣ್ಣಗೌಡ ಕ್ಯಾತನಾಳ, ಮಹಾದೇವಪ್ಪ ಯಲಸತ್ತಿ, ಶರಣಗೌಡ ಕಾಳೆಬೆಳಗುಂದಿ, ಖಂಡಪ್ಪ ದಾಸನ್, ಶರಣಗೌಡ ಬಾಡಿಯಾಳ, ಸಿದ್ದಲಿಂಗಪ್ಪ ನಾಯಕ, ಸೋಮನಾಥ ಜೈನ್, ಬಸವರಾಜ ಚಂಡ್ರಿಕಿ, ರುದ್ರಗೌಡ ಪಾಟೀಲ್, ಸೋಮು ರಾಠೋಡ್, ಸೋಮು ಮುದ್ನಾಳ್ ‌ಸೇರಿದಂತೆ ಬಿಜೆಪಿಯ ಕಾರ್ಯಕರ್ತರಿದ್ದರು.

ABOUT THE AUTHOR

...view details