ಕರ್ನಾಟಕ

karnataka

ETV Bharat / state

ಸಿಎಂ ಗ್ರಾಮ ವಾಸ್ತವ್ಯ: ಯಾದಗಿರಿಯಲ್ಲಿ ಕೈ-ಜೆಡಿಎಸ್​ ಮಧ್ಯೆ ಶುರುವಾಯ್ತು ಬ್ಯಾನರ್​ ರಾಜಕೀಯ - ಜೆಡಿಎಸ್​

ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಚಂಡ್ರಕಿ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೇವಲ ಜೆಡಿಎಸ್​ ಕಾರ್ಯಕರ್ತರ ಫೋಟೊಗಳನ್ನು ಮಾತ್ರ ಬ್ಯಾನರ್​ನಲ್ಲಿ ಹಾಕಿದ್ದಾರೆಂದು ಕಾಂಗ್ರೆಸ್​ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾದಗಿರಿಯಲ್ಲಿ ಸಿಎಂ ವಾಸ್ತವ್ಯ

By

Published : Jun 20, 2019, 8:48 PM IST

ಯಾದಗಿರಿ: ಸಿಎಂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯಕ್ಕೆ ಜಿಲ್ಲೆಯ ಚಂಡ್ರಕಿ ಗ್ರಾಮ ಸಿದ್ಧವಾಗಿದೆ. ಅಲ್ಲದೆ, ಫ್ಲೆಕ್ಸ್​, ಬ್ಯಾನರ್​​​ಗ​ಳು ರಾರಾಜಿಸುತ್ತಿದ್ದು, ಜಿಲ್ಲೆಯು ಮಧುವಣಗುತ್ತಿಯಂತೆ ಸಿಂಗಾರಗೊಂಡಿದೆ.

ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಚಂಡ್ರಕಿ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ಯಾದಗಿರಿಯಲ್ಲಿ ಶುರುವಾಯ್ತು ಬ್ಯಾನರ್​ ರಾಜಕೀಯ

ಇನ್ನು ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಶಾಸಕ ನಾಗನಗೌಡ ಕಂದಕೂರ ಹಾಗೂ ಅವರ ಮಗ ಶರಣಗೌಡ ಕಂದಕೂರ ಫೋಟೊಗಳು ನಗರದಲ್ಲಿ ಕಂಡು ಬರುತ್ತಿರುವುದು ‌ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ನಾಯಕರಿಂದಲೇ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದ್ರೆ ಜೆಡಿಎಸ್ ಪಕ್ಷದವರು ಕೇವಲ ತಮ್ಮ ಪಕ್ಷದವರ ಬ್ಯಾನರ್​​ಗಳನ್ನು ಮಾತ್ರ ಅಳವಡಿಸಿ ಮೈತ್ರಿ ಸರ್ಕಾರಕ್ಕೆ ಅವಮಾನ ಮಾಡ್ತಿದಾರೆ ಎಂದು ಶಾಸಕ ನಾಗನಗೌಡ ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ್​ ಅವರ ಫೋಟೊವನ್ನು ಬ್ಯಾನರ್​ನಲ್ಲಿ ಹಾಕದಿರುವುದಕ್ಕೆ ಸ್ಥಳೀಯ ಕಾಂಗ್ರೆಸಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details