ಸುರಪುರ (ಯಾದಗಿರಿ): ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತಾಲೂಕಿನ ಶರಣಬಸಪ್ಪ ಬಡಿಗೇರ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 5ನೇ ರ‍್ಯಾಂಕ್ ಬಂದಿದ್ದಾನೆ.
ಸುರಪುರ ತಾಲೂಕಿನ ಕಟ್ಟಕಡೆಯ ಕುಗ್ರಾಮವಾದ ತಳ್ಳಳ್ಳಿ (ಬಿ) ಗ್ರಾಮದ ಹನುಮಂತ್ರಾಯ-ಶಾಂತಮ್ಮ ದಂಪತಿಗೆ ಒಟ್ಟು 6 ಜನ ಮಕ್ಕಳಿದ್ದು, ಇವರಲ್ಲಿ 3ನೇ ಮಗನಾದ ಶರಣಬಸಪ್ಪ ಪಿಯುಸಿಯಲ್ಲಿ ಸಾಧನೆ ಮಾಡಿದ್ದಾನೆ.
ಈ ಕುರಿತು ಈಟಿವಿ ಭಾರತದೊಂದಿಗೆ ಸಂತಸ ಹಂಚಿಕೊಂಡಿರುವ ಶರಣಬಸಪ್ಪ, ಬೆಳಗ್ಗೆ 4 ಗಂಟೆಗೆ ಎದ್ದು ನಿರಂತರ ಅಭ್ಯಾಸ ಮಾಡುತ್ತಿದ್ದೆ. ಕಷ್ಟದ ವಿಷಯಗಳನ್ನು ಮೊದಲು ಕಲಿಯುತ್ತಿದ್ದೆ. ರ‍್ಯಾಂಕ್ ಬಂದಿರುವುದು ಸಂತಸ ತಂದಿದೆ ಎಂದಿದ್ದಾನೆ.
ಪಿಯುಸಿಯಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್ ಬಂದು ಜಿಲ್ಲೆಗೆ ಕೀರ್ತಿ ತಂದ ಕುಗ್ರಾಮದ ವಿದ್ಯಾರ್ಥಿ ಕೊಟ್ಟೂರಿನ ಹಿಂದೂ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡಿರುವ ಶರಣಬಸಪ್ಪ ಬಡಿಗೇರ, ಪರೀಕ್ಷೆಯಲ್ಲಿ 600 ಅಂಕಗಳಿಗೆ 589 ಅಂಕ ಪಡೆದು ರಾಜ್ಯಕ್ಕೆ 5ನೇ ರ‍್ಯಾಂಕ್ ಬಂದಿದ್ದಾನೆ.