ಯಾದಗಿರಿ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಾದ ಆಯುಷ್ಮಾನ್ ಭಾರತ ಆರೋಗ್ಯ ಸೇರಿದಂತೆ ವಿವಿಧ ಯೋಜನೆಗಳ ಕಾರ್ಡ್ಗಳನ್ನು 'ರಾಜುಗೌಡ್ರ ಗ್ರೌಂಡ್ ವರ್ಕ್ ಟೀಮ್' ವತಿಯಿಂದ ಫಲಾನುಭವಿಗಳಿಗೆ ವಿತರಿಸಲಾಯಿತು.
ಹುಣಸಗಿ ತಾಲೂಕಿನ ಕೂಡ್ಲಿಗಿ ಗ್ರಾಮದಲ್ಲಿ ನಡೆದ ಈ ಕಾರ್ಯಕ್ರಮವನ್ನು ದೀಪ ಬೇಳಗಿಸುವ ಮೂಲಕ ಶಾಸಕ ರಾಜುಗೌಡ ಉಧ್ಘಾಟಿಸಿದರು. ಒಟ್ಟು 11 ಸಾವಿರಕ್ಕೂ ಹೆಚ್ಚು ಕಾರ್ಡನ್ನು ಸಿದ್ದಪಡಿಸಿ ಆಯಾ ಫಲಾನುಭವಿಗಳಿಗೆ ಕಾರ್ಡ್ಗಳನ್ನ ವಿತರಣೆ ಮಾಡಲಾಯಿತು.
ಹಗಲಿರುಳು ಅನ್ನದೆ ಈ ಕೆಲಸಕ್ಕೆ ಶ್ರಮವಹಿಸಿದಂತ ತಮ್ಮ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಹಾಗೂ ಸಹಕಾರ ನೀಡಿದ ಜಿಲ್ಲಾಡಳಿತಕ್ಕೆ ಶಾಸಕ ರಾಜುಗೌಡ ಅಭಿನಂದನೆ ಸಲ್ಲಿಸಿದರು.
'ರಾಜುಗೌಡ್ರ ಗ್ರೌಂಡ್ ವರ್ಕ್ ಟೀಮ್' ವತಿಯಿಂದ ಆಯುಷ್ಮಾನ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಜೇಂದ್ರ ಮಹಾರಾಜರಿಗೆ ಮೊದಲ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೂಡ್ಲಿಗಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದಿಂದ ಬಂದಂತಹ ಫಲಾನುಭವಿಗಳು ಸರ್ಕಾರದ ಹಲವು ಯೋಜನೆಗಳ ಕಾರ್ಡ್ಗಳನ್ನು ಪಡೆದುಕೊಂಡರು.