ಯಾದಗಿರಿ:ಆಟೋ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವುನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಿದ್ದಾಪುರ ಬಳಿ ನಡೆದಿದೆ. ವೆಂಕಟೇಶ (21) ದೇವರಗೋನಾಲ ನಿವಾಸಿ, ನಾರಾಯಣ (20) ಶಿರಸಿ ನಿವಾಸಿ ಮೃತ ದುರ್ದೈವಿಗಳು. ಇಬ್ಬರು ಬಿಲ್ವಿದ್ಯೆ ಕ್ರೀಡಾಪಟುಗಳಾಗಿದ್ದರು.
ಆಟೋ - ಟ್ರ್ಯಾಕ್ಟರ್ ನಡುವೆ ಡಿಕ್ಕಿ: ಬಿಲ್ವಿದ್ಯೆ ಕ್ರೀಡಾಪಟುಗಳಿಬ್ಬರ ಸಾವು - ETV Bharath Karnataka
ಬಿಲ್ವಿದ್ಯೆ ಕ್ರೀಡಾಪಟುಗಳಿಬ್ಬರ ಆಟೋ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಆಟೋ-ಟ್ರಾಕ್ಟರ್ ನಡುವೆ ಡಿಕ್ಕಿ
ಟಂಟಂನಲ್ಲಿ ಸುರಪುರದಿಂದ ದೇವರಗೋನಾಲ ಕಡೆ ತೆರಳುತ್ತಿದ್ದಾಗ ಕಬ್ಬು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ಕಳೆದುಕೊಂಡು ಒಂದಕ್ಕೊಂದು ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ರಸ್ತೆ ಅಪಘಾತದಲ್ಲಿ ಐದು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.