ಸುರಪುರ: ತಾಲೂಕಿನ ಶಖಾಪುರ ಎಸ್.ಹೆಚ್ ಗ್ರಾಮದ ಅಂಬರೀಶ್ ಎಂಬ ದಂಪತಿ ಮತ್ತು ಅವರ ಇಬ್ಬರು ಮಕ್ಕಳನ್ನು ಮಹಾರಾಷ್ಟ್ರದಿಂದ ಕರೆ ತಂದು ತಾಲೂಕು ಆಡಳಿತ ಈ ದಂಪಗೆ ಕ್ವಾರಂಟೈನ್ ಕಲ್ಪಿಸದೆ ಬೇಜವಾಬ್ದಾರಿತನ ತೋರಿರುವ ಆರೋಪ ಕೇಳಿ ಬಂದಿದೆ.
ಬೆಳಗ್ಗೆ ಮಹಾರಾಷ್ಟ್ರದಿಂದ ಬಂದ ಇವರನ್ನು ಗ್ರಾಮಕ್ಕೆ ಹೋಗಿ ಎಂದು ಕಳುಹಿಸಿಕೊಟ್ಟು ಶಾಲೆಯಲ್ಲಿ ಉಳಿದುಕೊಳ್ಳುವಂತೆ ತಿಳಿಸಿದ್ದಾರೆ. ಇವರೊಂದಿಗೆ ತಾಲೂಕಿನ ಯಾವುದೇ ಅಧಿಕಾರಿಗಳು ಜೊತೆ ಹೋಗದ್ದರಿಂದ ಅವರು ಗ್ರಾಮದಲ್ಲಿ ಓಡಾಡಿದ್ದು, ಉಳಿದುಕೊಳ್ಳಲು ಮನೆಯೂ ಇಲ್ಲದೆ ಶಾಲೆಯಲ್ಲಿ ಇರುವುದಕ್ಕೆ ಗ್ರಾಮದ ಜನರು ವಿರೋಧಿಸಿ ಮರಳಿ ಕಳುಹಿಸಿದ್ದಾರೆ. ತಹಶೀಲ್ದಾರರಾಗಲಿ, ಗ್ರಾಮ ಪಂಚಾಯಿತಿಯ ಅಧಿಕಾರಿಗಳಾಗಲಿ ಇವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸದೆ ಬೇಜವಾಬ್ದಾರಿತನ ತೋರಿದ್ಧಾರೆ ಎನ್ನಲಾಗಿದೆ. ಇದರಿಂದ ದಂಪತಿ ಹೊರಗಡೆ ಓಡಾಡಿಕೊಂಡಿದ್ದು, ರಾತ್ರಿಯಾಗುತ್ತಿದ್ದಂತೆ ಸುರಪುರಕ್ಕೆ ಬಂದು ತಹಶೀಲ್ದಾರ್ ಕಚೇರಿ ಸಮೀಪ ನಡು ರಸ್ತೆಯಲ್ಲಿ ನಿಂತಿದ್ದಾರೆ.