ಕರ್ನಾಟಕ

karnataka

ETV Bharat / state

ಟೈಲ್ಸ್​ಗೆ ಹಣ ಕೇಳಿದಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ : ಸಿಸಿ ಟಿವಿಯಲ್ಲಿ ದೃಶ್ಯ ಸೆರೆ - ಯಾದಗಿರಿ

ಆರು ತಿಂಗಳ‌ ಹಿಂದೆ ನಗರದ ಲಕ್ಕಿ ಬಾರ್ ಮಾಲೀಕ ರಾಘವೇಂದ್ರ ಎನ್ನುವವರು ರವಿ ಟೈಲ್ಸ್ ಅಂಗಡಿಯಿಂದ 3 ಸಾವಿರ ರೂ.ಟೈಲ್ಸ್ ಖರೀದಿ ಮಾಡಿ, ಕೆಲವು ದಿನಗಳ ನಂತರ ಹಣ ಕೊಡುವುದಾಗಿ ಹೇಳಿದ್ರು..

assault  scene captured on CCTV
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ..

By

Published : Mar 1, 2021, 9:59 AM IST

ಯಾದಗಿರಿ: ಖರೀದಿಸಿದ ಟೈಲ್ಸ್​ಗೆ ಹಣ ಕೇಳಿದಕ್ಕೆ ಗ್ಯಾಂಗ್ ಕಟ್ಟಿಕೊಂಡು ಬಂದು ಟೈಲ್ಸ್ ಅಂಗಡಿ ಮಾಲೀಕನಿಗೆ ಮತ್ತು ಕೆಲಸಗಾರರಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಗಂಜ್ ಸರ್ಕಲ್ ಬಳಿಯ ಟೈಲ್ಸ್ ಅಂಗಡಿಯಲ್ಲಿ ಫೆ.25ರಂದು ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರು ತಿಂಗಳ‌ ಹಿಂದೆ ನಗರದ ಲಕ್ಕಿ ಬಾರ್ ಮಾಲೀಕ ರಾಘವೇಂದ್ರ ಎಂಬಾತ ರವಿ ಟೈಲ್ಸ್ ಅಂಗಡಿಯಿಂದ 3 ಸಾವಿರ ರೂ.ಟೈಲ್ಸ್ ಖರೀದಿಸಿದ್ದು, ಕೆಲವು ದಿನಗಳು ಬಿಟ್ಟು ಹಣ ಕೊಡುವುದಾಗಿ ಹೇಳಿದ್ರು.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ..

ಆದರೆ, ಟೈಲ್ಸ್ ಖರೀದಿಸಿ ಆರೇಳು ತಿಂಗಳಾದ್ರೂ ರಾಘವೇಂದ್ರ ಹಣ ನೀಡಲಿಲ್ಲ. ಇದರಿಂದಾಗಿ ಟೈಲ್ಸ್ ಅಂಗಡಿ ಮಾಲೀಕ ರವಿಯವರು ತಮ್ಮ ಅಂಗಡಿ ಕೆಲಸಗಾರ ಸುಭಾಷ್ ಎಂಬಾತನನ್ನು ಹಣ ವಸೂಲಿಗೆ ರಾಘವೇಂದ್ರನ ಬಳಿಕ ಕಳುಹಿಸಿದ್ದರು.

ಈ ವೇಳೆ ರಾಘವೇಂದ್ರ ಹಣ ಕೊಡಲು ನಿರಾಕರಿಸಿದ್ದಾರೆ. ಹೀಗಾಗಿ, ಸುಭಾಷ್ ರಾಘವೇಂದ್ರನ ಮೊಬೈಲ್ ಕಸಿದುಕೊಂಡು ಬಂದಿದ್ದರು. ಇದರಿಂದಾಗಿ ಆಕ್ರೋಶಗೊಂಡ ರಾಘವೇಂದ್ರ 30 ಜನರ ಜೊತೆಗೆ ಟೈಲ್ಸ್ ಅಂಗಡಿಗೆ ಬಂದು, ಮಾಲೀಕ ರವಿ ಸೇರಿ ಕೆಲಸಗಾರರ ಮೇಲೆ ಹಲ್ಲೆ ನಡೆಸಿದ್ದಾರೆ.

ರಾಘವೇಂದ್ರ ಮತ್ತು ಆತನ ಸಹಚರರು ಹಲ್ಲೆ ‌ನಡೆಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆದರೆ, ಈ ಘಟನೆ ನಡೆದು ಮೂರು ದಿನಗಳು ಕಳೆದರೂ ಯಾದಗಿರಿ ನಗರ ಠಾಣೆಯ ಪೊಲೀಸರು ಕೇಸ್ ದಾಖಲಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಯಾದಗಿರಿ ನಗರ ಠಾಣೆಯ ಸಿಬ್ಬಂದಿ ನಡೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಟೈಲ್ಸ್ ಅಂಗಡಿ ಮಾಲೀಕ ರವಿ ಆರೋಪಿಸಿದ್ದಾರೆ.

ABOUT THE AUTHOR

...view details