ಯಾದಗಿರಿ : ಹುಡುಗಿಯರನ್ನ ಮುಂದಿಟ್ಟುಕೊಂಡು ಹನಿ ಟ್ರ್ಯಾಪ್ ನಡೆಸುತ್ತಿದ್ದ, ಆರೋಪಿಗಳನ್ನು ಶಹಾಪುರ ಪೊಲೀಸರು ಬಂಧಿಸಿದ್ದಾರೆ.
ಅಪರಿಚಿತ ಹುಡುಗಿ ಮಾತು ಕೇಳಿ ಮರುಳಾಗ್ಬೇಡಿ.. ಯಾದಗಿರಿಯಲ್ಲಿ ಹನಿ ಟ್ರ್ಯಾಪ್ ಬ್ಲ್ಯಾಕ್ ಮೇಲರ್ಗಳು ಅಂದರ್ - Honey trap in kalaburagi
ರಾಜ್ಯದಲ್ಲಿ ಹನಿ ಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈಗ ಮತ್ತೆ ಯಾದಗಿರಿ ಜಿಲ್ಲೆಯಲ್ಲಿ ಮತ್ತೆ ಅದೇ ಪ್ರಕರಣದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.
![ಅಪರಿಚಿತ ಹುಡುಗಿ ಮಾತು ಕೇಳಿ ಮರುಳಾಗ್ಬೇಡಿ.. ಯಾದಗಿರಿಯಲ್ಲಿ ಹನಿ ಟ್ರ್ಯಾಪ್ ಬ್ಲ್ಯಾಕ್ ಮೇಲರ್ಗಳು ಅಂದರ್](https://etvbharatimages.akamaized.net/etvbharat/prod-images/768-512-4234296-thumbnail-3x2-vish.jpg)
ಹನಿ ಟ್ರ್ಯಾಪ್ ಆರೋಪಿಗಳು ಅಂದರ್
ಸಿದ್ದಣ್ಣಗೌಡ ಪಾಟೀಲ್ ಶೀರವಾಳ, ಮಂಜುಳಾ ರಾಥೋಡ, ರಮೇಶ ರಾಥೋಡ, ಮೇಘಾ ಸುರಪೂರ ಎಂಬುವವರನ್ನು ಬಂಧಿಸಲಾಗಿದ್ದು,ನಗರದ ಕೆಲವೆಡೆ ಹೆಣ್ಣುಮಕ್ಕಳನ್ನು ಮುಂದಿಟ್ಟುಕೊಂಡು ಹನಿಟ್ಯ್ರಾಪ್ ನಡೆಸಿ ಬ್ಲ್ಯಾಕ್ ಮೇಲ್ ತಂತ್ರದ ಮೂಲಕ ಹಣ ಪೀಕುತ್ತಿದ್ದರು. ಹಣ ಕಳೆದುಕೊಂಡವರ ದೂರಿನ ಮೇರೆಗೆ ಪೊಲೀಸರು ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಇವರಿಂದ 98,000 ರೂಪಾಯಿ ಹಣವನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.