ಗುರುಮಠಕಲ್: ತಾಲೂಕಿನ ಅರಕೇರಾ ಬ್ರಹ್ಮವಿದ್ಯಾಶ್ರಮದ ಸಿದ್ಧಲಿಂಗ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಇಂದು ಬೆಳಗ್ಗೆ ಎದೆನೋವು ಕಾಣಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ಹೃದಯಾಘಾತದಿಂದ ಶಿವೈಕ್ಯರಾಗಿದ್ದಾರೆ.
ಶನಿವಾರ ಸಿದ್ಧಾರೂಢ ಆಶ್ರಮದ ವಿಧಿವಿಧಾನದಂತೆ ಶ್ರೀಗಳ ಅಂತ್ಯಕ್ರಿಯೆ ಜರುಗಲಿದೆ ಎಂದು ಆಶ್ರಮದ ಮೂಲಗಳು ತಿಳಿಸಿವೆ. ಶ್ರೀಗಳ ಅಕಾಲಿಕ ಅಗಲಿಕೆಯಿಂದ ಅಪಾರ ಭಕ್ತರು ದುಃಖ ತಪ್ತರಾಗಿದ್ದಾರೆ. ಅಕ್ಟೋಬರ್ 2, 1972 ರಲ್ಲಿ ಯಾದಗಿರಿ ತಾಲೂಕಿನ ಬಾಚವಾರದಲ್ಲಿ ಮಾತೋಶ್ರೀ ಅನಂತಮ್ಮ ಶರಣಪ್ಪರ ಉದರದಲ್ಲಿ ಜನಿಸಿದ್ದ ಇವರು, ಬಾಲ ಬ್ರಹ್ಮಚಾರಿಯಾಗಿ 1986 ರಲ್ಲಿ ತಮ್ಮ 14 ನೇ ವಯಸ್ಸಿನಲ್ಲಿ ಬಸವಾನಂದ ಮಹಾಸ್ವಾಮೀಜಿಯಿಂದ ದೀಕ್ಷೆ ಪಡೆದರು.