ಯಾದಗಿರಿ: ಜಿಲ್ಲೆಯಲ್ಲಿ ಇಂದು 7 ವರ್ಷದ ಬಾಲಕ ಸೇರಿ 8 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 873ಕ್ಕೆ ಏರಿಕೆಯಾಗಿದೆ.
ಯಾದಗಿರಿಯಲ್ಲಿಂದು 7 ವರ್ಷದ ಬಾಲಕ ಸೇರಿ 8 ಜನರಿಗೆ ಕೊರೊನಾ - yadagiri corona pandemic
ಯಾದಗಿರಿ ಜಿಲ್ಲೆಯಲ್ಲಿ 7 ವರ್ಷದ ಬಾಲಕ ಸೇರಿ ಇಂದು 8 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈವರೆಗೆ ಪತ್ತೆಯಾದ ಒಟ್ಟು 873 ಪ್ರಕರಣಗಳ ಪೈಕಿ 483 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ.
31 ವರ್ಷದ ಮಹಿಳೆ (ಪಿ-7889), 24 ವರ್ಷದ ಪುರುಷ (ಪಿ-7890), 30 ವರ್ಷದ ಪುರುಷ (ಪಿ-7891), 26 ವರ್ಷದ ಮಹಿಳೆ (ಪಿ-7892), 7 ವರ್ಷದ ಬಾಲಕ (ಪಿ-7893), 38 ವರ್ಷದ ಮಹಿಳೆ (ಪಿ-7894), 36 ವರ್ಷದ ಮಹಿಳೆ (ಪಿ-7895), 34 ವರ್ಷದ ಮಹಿಳೆ (ಪಿ-7896)ಗೆ ಸೋಂಕು ದೃಢಪಟ್ಟಿದೆ. ಪಿ-7894, ಪಿ-7895, ಪಿ-7896ರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದ್ದು, ಉಳಿದ ಸೋಂಕಿತರೆಲ್ಲರೂ ಮಹಾರಾಷ್ಟ್ರದ ಮುಂಬೈನಿಂದ ಜಿಲ್ಲೆಗೆ ಮರಳಿದ್ದರು.
ಇತ್ತೀಚೆಗೆ ಮುಂಬೈನಿಂದ ಆಗಮಿಸಿದ್ದ ಇವರನ್ನೆಲ್ಲ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿತ್ತು. ಇಂದು ಇವರ ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ. ಒಟ್ಟು ಪ್ರಕರಣಗಳ ಪೈಕಿ 483 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ.