ಯಾದಗಿರಿ: ಸಂಪೂರ್ಣವಾಗಿ ಶಿಥಿಲ ವ್ಯವಸ್ಥೆಯಲ್ಲಿರುವ ಕಟ್ಟಡದಲ್ಲಿ ಅಂಗನವಾಡಿ ಶಾಲೆ ನಡೆಸಲಾಗುತ್ತಿದೆ. ಯಾವಾಗ ಈ ಕಟ್ಟಡ ಕುಸಿದು ಬಿದ್ದು ಅನಾಹುತ ಸೃಷ್ಟಿ ಮಾಡುತ್ತೋ ಅನ್ನೋ ಆತಂಕದಲ್ಲಿ ಸುರಪುರ ತಾಲ್ಲೂಕಿನ ಹಂದ್ರಾಳ ಗ್ರಾಮಸ್ಥರಿದ್ದಾರೆ.
ಕುಸಿದು ಬೀಳೋ ಹಂತದಲ್ಲಿ ಅಂಗನವಾಡಿ ಶಾಲೆ, ಆತಂಕದಲ್ಲಿ ಗ್ರಾಮಸ್ಥರು! - ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲ
ಹಳೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಂಗನವಾಡಿ ನಡೆಸಲಾಗುತ್ತಿದ್ದು, ಇದೀಗ ಕಟ್ಟಡದ ಮೇಲ್ಛಾವಣಿ ಕುಸಿದು ಬೀಳುವ ಹಂತ ತಲುಪಿದೆ.
ಕುಸಿದು ಬೀಳೋ ಹಂತದಲ್ಲಿ ಅಂಗನವಾಡಿ ಶಾಲೆ
ಗ್ರಾಮದ ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲ. ಹೀಗಾಗಿ ಹಳೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಹಳೆ ಕಟ್ಟಡವಾಗಿರುದರಿಂದ ಮೇಲ್ಛಾವಣಿ ಕುಸಿದು ಬೀಳುವ ಹಂತ ತಲುಪಿದೆ. ಅಂಗನವಾಡಿ ದುಸ್ಥಿತಿಯಿಂದ ಅಲ್ಲಿ ಬರುವ ಮಕ್ಕಳ ಪೋಷಕರಲ್ಲಿ ಆತಂಕ ಮೂಡಿದೆ.
ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈ ಅಂಗನವಾಡಿಗೆ ನೂತನ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಬೇಕು. ಮುಂದಾಗುವ ಅನಾಹುತ ತಪ್ಪಿಸಬೇಕಾಗಿದೆ ಎಂಬುದು ಸಾರ್ವಜನಿಕರ ಅಳಲಾಗಿದೆ.