ಕರ್ನಾಟಕ

karnataka

ETV Bharat / state

ರೈತರ ಪ್ರತಿಭಟನೆ: ಒಂದು ಗಂಟೆ ಟ್ರಾಫಿಕ್​​ನಲ್ಲಿ ಸಿಲುಕಿದ ಆ್ಯಂಬುಲೆನ್ಸ್..! - ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ

ಶಹಾಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಒಂದು ಗಂಟೆಗಳ ಕಾಲ ಟ್ರಾಫಿಕ್ ನಲ್ಲಿಯೇ ಆ್ಯಂಬುಲೆನ್ಸ್ ಸಿಲುಕಿಕೊಂಡು ಪರದಾಡಿದ ಘಟನೆ ನಡೆಯಿತು.

Ambulance at one hour traffic
ಒಂದು ಗಂಟೆ ಟ್ರಾಫಿಕ್​​ನಲ್ಲಿ ಆ್ಯಂಬುಲೆನ್ಸ್

By

Published : Feb 6, 2021, 7:06 PM IST

ಯಾದಗಿರಿ:ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ, ಯಾದಗಿರಿ ಜಿಲ್ಲೆಯಲ್ಲೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಟ್ರಾಫಿಕ್​ನಲ್ಲಿ ಆ್ಯಂಬುಲೆನ್ಸ್​ ಸಿಲುಕಿಕೊಂಡ ಘಟನೆ ಶಹಾಪುರ ನಗರದಲ್ಲಿ ನಡೆದಿದೆ.

ಬೀದರ್ ಮತ್ತು ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು, ಇಂದು ಜಿಲ್ಲೆಯ ವಿವಿಧ ರೈತ ಪರ ಸಂಘಟನೆಗಳಿಂದ ಶಹಾಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಒಂದು ಗಂಟೆಗಳ ಕಾಲ ಟ್ರಾಫಿಕ್ ನಲ್ಲಿಯೇ ಆ್ಯಂಬುಲೆನ್ಸ್ ಸಿಲುಕಿಕೊಂಡ ಘಟನೆ ನಡೆಯಿತು.

ಒಂದು ಗಂಟೆ ಟ್ರಾಫಿಕ್​​ನಲ್ಲಿ ಆ್ಯಂಬುಲೆನ್ಸ್

ಇನ್ನು ಆ್ಯಂಬುಲೆನ್ಸ್​ನಲ್ಲಿ ಭೀಮರಾಯನಗುಡಿಯಿಂದ ಶಹಾಪುರ ಪಟ್ಟಣದ ಆಸ್ಪತ್ರೆಗೆ, ವಿಷ ಸೇವಿಸಿದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗುತ್ತಿತ್ತು. ದಾರಿ ಮಧ್ಯೆ ರೋಗಿ ಸಾವು ಬದುಕಿನ ನಡುವೆ ಪರದಾಡುವಂತಾಯಿತು.

ABOUT THE AUTHOR

...view details