ಯಾದಗಿರಿ: ಶಾಂತಿ ಭಂಗವನ್ನುಂಟು ಮಾಡಲು ರಾತ್ರೊ ರಾತ್ರಿ ಅಂಬೇಡ್ಕರ್ ನಾಮಫಲಕದ ಪಕ್ಕದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನಾಮಫಲಕ ಹಾಕಲಾಗಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಅಂಬಿಗರ ಚೌಡಯ್ಯ ನಾಮಫಲಕವನ್ನ ತೆರವುಗೊಳಿಸುವಂತೆ ಆಗ್ರಹಿಸಿ ಯಾದಗಿರಿಯಲ್ಲಿಂದು ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ತಾಲ್ಲೂಕಿನ ಅರಕೇರಾ (ಕೆ) ಗ್ರಾಮದ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಅರ್ಧ ಗಂಟೆಗೂ ಅಧಿಕ ಕಾಲ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ವೃತ್ತದಲ್ಲಿ ಸುಮಾರು 10 ವರ್ಷದ ಹಿಂದೆ ಅಂಬೇಡ್ಕರ್ ನಾಮಫಲಕ ಅಳವಡಿಸಲಾಗಿದ್ದು, ಕೆಲ ಜನ ರಾತ್ರೊ ರಾತ್ರಿ ಅಂಬೇಡ್ಕರ್ ನಾಮಫಲಕದ ಪಕ್ಕದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನಾಮಫಲಕ ಹಾಕುವ ಮೂಲಕ ಶಾಂತಿ ಭಂಗವನ್ನುಂಟು ಮಾಡುವಂತಾ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.